ಅಭಿಪ್ರಾಯ / ಸಲಹೆಗಳು

ದೃಷ್ಟಿ ಮೂಲೋದ್ದೇಶಗಳು ಕಾರ್ಯಾಚರಣೆ

ಧ್ಯೇಯೋದ್ದೇಶಗಳು:

  1. ರಾಷ್ಟ್ರೀಯಸೇವಾ ಪರಿಯೋಜನೆಯ (ಎನ್‍ಎಸ್‍ಎಸ್) ಮುಖ್ಯ ಧ್ಯೇಯೋದ್ದೇಶಗಳು ಈ ಮುಂದಿನಂತಿವೆ:
  2. ಅವರುಯಾವ ಸಮುದಾಯದಲ್ಲಿ ಕೆಲಸ ಮಾಡುತ್ತಿರುವರೋ ಆ ಸಮುದಾಯವನ್ನು ಅರ್ಥಮಾಡಿಕೊಳ್ಳುವುದು;
  3. ತಮ್ಮಸಮುದಾಯದ ಸಂಬಂಧದಲ್ಲಿ ಸ್ವತಃ ತಮ್ಮನ್ನು ಅರ್ಥಮಾಡಿಕೊಳ್ಳುವುದು;
  4. ಸಮುದಾಯದಅಗತ್ಯತೆಗಳು ಮತ್ತು ಸಮಸ್ಯೆಗಳನ್ನು ಗುರುತಿಸುವುದು ಹಾಗೂ ಸಮಸ್ಯೆಯನ್ನು ಬಗೆಹರಿಸುವಲ್ಲಿ ಅವರನ್ನು ತೊಡಗಿಸಿಕೊಳ್ಳುವುದು;
  5. ಅವರನಡುವೆ ಸಾಮಾಜಿಕ ಮತ್ತು ನಾಗರಿಕ ಜವಾಬ್ದಾರಿಯ ಪ್ರಜ್ಞೆಯನ್ನು ಬೆಳೆಸುವುದು.
  6. ವೈಯಕ್ತಿಕಮತ್ತು ಸಾಮಾಜಿಕ ಸಮಸ್ಯೆಗಳಿಗೆ ವಾಸ್ತವಿಕ ಪರಿಹಾರಗಳನ್ನು ಕಂಡುಕೊಳ್ಳುವಲ್ಲಿ ಅವರ ಜ್ಞಾನವನ್ನು ಬಳಸಿಕೊಳ್ಳುವುದು;
  7. ಸಾಮೂಹಿಕವಾಗಿಬದುಕಲು ಮತ್ತು ಜವಾಬ್ದಾರಿಗಳನ್ನು ಹಂಚಿಕೊಳ್ಳುವುದಕ್ಕೆ ಅಗತ್ಯವಾದ ದಕ್ಷತೆಯನ್ನು ಬೆಳೆಸುವುದು;
  8. ಸಮುದಾಯದಪಾಲ್ಗೊಳ್ಳುವಿಕೆಯನ್ನು ಸಜ್ಜುಗೊಳಿಸುವಲ್ಲಿ ಕೌಶಲಗಳನ್ನು ಗಳಿಸುವುದು;
  9. ನಾಯಕತ್ವದಗುಣಮಟ್ಟಗಳು ಮತ್ತು ಪ್ರಜಾಸತ್ತಾತ್ಮಕ ಮನೋಭಾವಗಳನ್ನು ಹೊಂದಿರುವುದು;
  10. ತುರ್ತುಪರಿಸ್ಥಿತಿಗಳು ಮತ್ತು ನೈಸರ್ಗಿಕ ವಿಕೋಪಗಳನ್ನು ಎದುರಿಸುವ ಸಾಮಥ್ರ್ಯವನ್ನು ಬೆಳೆಸಿಕೊಳ್ಳುವುದು; ಮತ್ತು
  11. ರಾಷ್ಟ್ರೀಯಸಮಗ್ರತೆ ಮತ್ತು ಸಾಮಾಜಿಕ ಸಾಮರಸ್ಯವನ್ನು ರೂಢಿಸಿಕೊಳ್ಳುವುದು.

 

ವ್ಯಾಪ್ತಿ:

  • ಪ್ರಾರಂಭಿಕವಾಗಿ, ಈ ಪರಿಯೋಜನೆಯನ್ನು, 40,000 ಸ್ವಯಂಸೇವಕರನ್ನು ತೊಡಗಿಸಿಕೊಂಡು, 37 ವಿಶ್ವವಿದ್ಯಾನಿಲಯಗಳಲ್ಲಿ ಆರಂಭಿಸಲಾಗಿದ್ದು, ಹಲವಾರು ವರ್ಷಗಳಿಂದ ಅದು ಬೆಳೆದು ಬಂದಿದೆ ಮತ್ತು 200 ವಿಶ್ವವಿದ್ಯಾನಿಲಯಗಳು, ಪಾಲಿಟೆಕ್ನಿಕ್‍ಗಳು ಮತ್ತು +2 ಪದ್ಧತಿಗಳಲ್ಲಿ ವಿಸ್ತರಿಸಿ, 2.6 ದಶ ಲಕ್ಷಕಿಂತಲೂ ಹೆಚ್ಚು ಸ್ವಯಂಸೇವಕರನ್ನು ಒಳಗೊಂಡಿರುವುದರೊಂದಿಗೆ ಇಂದು ಇದನ್ನು ಅನುಷ್ಠಾನಗೊಳಿಸಲಾಗಿದೆ. ಎನ್‍ಎಸ್‍ಎಸ್ ಸ್ವಯಂಸೇವಕರು, ಸಮುದಾಯಕ್ಕೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವುದರಿಂದ, ಎನ್‍ಎಸ್‍ಎಸ್ ಸ್ವಯಂಸೇವಕರು ಅವರ ಪ್ರಯತ್ನಗಳಿಗೆಸಮುದಾಯ, ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಸಾರ್ವಜನಿಕರಿಂದ ಸಂಪೂರ್ಣ ಶ್ಲಾಘನೆಗೆ ಒಳಗಾಗಿದ್ದಾರೆ.
  •  

ಧ್ಯೇಯ ವಾಕ್ಯ:

"ನಾನಲ್ಲ ಆದರೆ ನೀವು" ಎಂಬ ಎನ್‍ಎಸ್‍ಎಸ್ ಧ್ಯೇಯ ವಾಕ್ಯವು ಪ್ರಜಾಸತ್ತಾತ್ಮಕ ಬದುಕಿನ ಮೂಲತತ್ವವನ್ನು ಬಿಂಬಿಸುತ್ತದೆ ಮತ್ತು ನಿಸ್ವಾರ್ಥ ಸೇವೆಯ ಅಗತ್ಯತೆಯನ್ನು ಎತ್ತಿಹಿಡಿಯುತ್ತದೆ. ಎನ್‍ಎಸ್‍ಎಸ್ ವಿದ್ಯಾರ್ಥಿಗಳು ಇತರ ವ್ಯಕ್ತಿಗಳ ದೃಷ್ಟಿಕೋನದ ಗ್ರಹಿಕೆಯನ್ನು ಬೆಳೆಸಿಕೊಳ್ಳಲು ಹಾಗೂಇತರ ಮಾನವ ಜೀವಿಗಳ ಬಗ್ಗೆ ಗಮನ ಹರಿಸಲು ಸಹ ಸಹಾಯ ಮಾಡುತ್ತದೆ. ಎನ್‍ಎಸ್‍ಎಸ್ ಮೂಲ ತತ್ವವು ಈ ಧ್ಯೇಯವಾಕ್ಯದ ಸಂಬಂಧದಲ್ಲಿ ಉತ್ತಮ ಸಿದ್ಧಾಂತವಾಗಿದ್ದು, ಇದು ಒಬ್ಬ ವ್ಯಕ್ತಿಯ ಕಲ್ಯಾಣವು ಇಡಿಯಾಗಿ ಸಮಾಜದ ಕಲ್ಯಾಣದ ಮೇಲೆ ಅಂತಿಮವಾಗಿ ಅವಲಂಬಿತವಾಗಿರುತ್ತದೆಎಂಬ ನಂಬಿಕೆಯ ಆಧಾರದ ಮೇಲೆ ನಿಂತಿರುತ್ತದೆ. ಆದ್ದರಿಂದ, ಎನ್‍ಎಸ್‍ಎಸ್ ಸ್ವಯಂಸೇವಕರು ಸಮಾಜದ ಒಳಿತಿಗಾಗಿ ಶ್ರಮಿಸಬೇಕು.

 

ಲಾಂಛನ:

  • ಎನ್‍ಎಸ್‍ಎಸ್ ಲಾಂಛನವನ್ನು ಭಾರತದ ಒಡಿಸಾದಲ್ಲಿರುವ ವಿಶ್ವ ಪ್ರಸಿದ್ಧ ಕೋನಾರ್ಕ್ ಸೂರ್ಯ ದೇವಾಲಯದ (ಕಪ್ಪು ಪಗೋಡ) ಬೃಹತ್ ರಥ ಚಕ್ರದ ಆಧಾರದ ಮೇಲೆ ಮಾಡಲಾಗಿದೆ. ಈ ಚಕ್ರವು ಸೃಷ್ಟಿಯ ಚಕ್ರ, ರಕ್ಷಣೆ ಮತ್ತು ವಿಮೋಚನೆಯನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತದೆ ಮತ್ತುಕಾಲಾವಧಿ ಉದ್ದಕ್ಕೂ ಜೀವನದಲ್ಲಿನ ಚಲನೆಯನ್ನು ಸೂಚಿಸುತ್ತದೆ. ಹೀಗೆ ಈ ಲಾಂಛನವು ನಿರಂತರತೆ ಹಾಗೂ ಬದಲಾವಣೆಗಾಗಿ ನಿಲ್ಲುತ್ತದೆ ಮತ್ತು ಸಮಾಜದ ಬದಲಾವಣೆಗಾಗಿ ಎನ್‍ಎಸ್‍ಎಸ್ ನಿರಂತರವಾಗಿ ಶ್ರಮಿಸಲು ಇಂಗಿತವನ್ನು ಸೂಚಿಸುತ್ತದೆ.

 

ಬ್ಯಾಡ್ಜ್:

  • ಎನ್‍ಎಸ್‍ಎಸ್ ಲಾಂಛನವನ್ನು ಬ್ಯಾಡ್ಜ್ ಮೇಲೆ ಉಬ್ಬು ಕೆತ್ತೆನೆ ಮಾಡಲಾಗಿದೆ. ಚಕ್ರದಲ್ಲಿರುವ ಎಂಟು ಅಡ್ಡಗೆರೆಗಳು ದಿನದ 24 ಗಂಟೆಗಳನ್ನು ಪ್ರತಿನಿಧಿಸುತ್ತವೆ. ಕೆಂಪು ಬಣ್ಣವು ಸ್ವಯಂಸೇವಕನು ಯುವ ರಕ್ತ ತುಂಬಿರುವ ಅಂದರೆ, ಚುರುಕಾದ ಸಕ್ರೀಯ, ಕಾರ್ಯಶೀಲ, ಶಕ್ತಿಯುತ ಮತ್ತು ಪೂರ್ಣಲವಲವಿಕೆಯುಳ್ಳವನಾಗಿರುತ್ತಾನೆ ಎಂಬುದನ್ನು ಸೂಚಿಸುತ್ತದೆ. ಗಾಢ ನೀಲಿ ವರ್ಣವು, ಎನ್‍ಎಸ್‍ಎಸ್ ಜಗತ್ತಿನ ಚಿಕ್ಕ ಭಾಗವಾಗಿದ್ದು, ಇದು ಮಾನವ ಜಾತಿಯ ಕಲ್ಯಾಣಕ್ಕಾಗಿ ತನ್ನ ಪಾಲನ್ನು ಕೊಡುಗೆಯಾಗಿ ನೀಡಲು ಸಿದ್ಧವಾಗಿರುತ್ತದೆ ಎಂಬುದನ್ನು ಸೂಚಿಸುತ್ತದೆ.

 

ಹಣಕಾಸು ಏರ್ಪಾಡುಗಳು:

  • ಈ ಪರಿಯೋಜನೆಗೆ, ನಿಯತ ಕಾರ್ಯಚಟುವಟಿಕೆಗಳು (ಆರ್.ಎ.) ಮತ್ತು ವಿಶೇಷ ಶಿಬಿರ ಕಾರ್ಯಕ್ರಮಗಳನ್ನು (ಎಸ್‍ಸಿಪಿ) ನಡೆಸಲು 7:5ರ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡು ಹಣಕಾಸನ್ನು ಒದಗಿಸಿವೆ. ನಿಯತ ಕಾರ್ಯಚಟುವಟಿಕೆಗಳ ಸಂಬಂಧದಲ್ಲಿ ಪ್ರತಿವರ್ಷ ಪ್ರತಿಯೊಬ್ಬಸ್ವಯಂಸೇವಕನಿಗೆ ರೂ. 250/- ಮೊಬಲಗನ್ನು ಮತ್ತು ದತ್ತು ಪಡೆದ ಗ್ರಾಮಗಳು/ ಸಮುದಾಯಗಳಲ್ಲಿ ನಡೆಸತಕ್ಕ 10 ದಿನಗಳ ಕಾಲಾವಧಿಯ ಪ್ರತಿಯೊಂದು ವಿಶೇಷ ಶಿಬಿರ ಕಾರ್ಯಕ್ರಮಕ್ಕೆ (ಎಸ್‍ಸಿಪಿ) ಪ್ರತಿಯೊಬ್ಬ ಸ್ವಯಂಸೇವಕನಿಗೆ ರೂ. 450/-ರ ಮೊಬಲಗನ್ನು ಬಿಡುಗಡೆ ಮಾಡಲಾಗಿದೆ. ಇದರಜೊತೆಗೆ, ಭಾರತ ಸರ್ಕಾರವು, ಎನ್‍ಎಸ್‍ಎಸ್ ಪ್ರಾದೇಶಿಕ ಕೇಂದ್ರಗಳು, ರಾಜ್ಯ ಸಂಪರ್ಕ ಕೋಶಗಳು ಮತ್ತು ಟಿಓಸಿಗಳು/ಟಿಓಆರ್‍ಸಿಗಳನ್ನು ನಡೆಸಲು ಶೇಕಡ 100ರಷ್ಟು ಹಣಕಾಸು ನೆರವನ್ನು ಒದಗಿಸುತ್ತದೆ. ಜಮ್ಮು ಮತ್ತು ಕಾಶ್ಮೀರ ಹಾಗೂ ವಿಧಾನಮಂಡಲಗಳಿಲ್ಲದ ಕೇಂದ್ರಾಡಳಿತ ಪ್ರದೇಶಗಳಲ್ಲಿಎನ್‍ಎಸ್‍ಎಸ್ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿಯೂ ಸಹ ಕೇಂದ್ರ ಸರ್ಕಾರ ಶೇಕಡ 100/-ರಷ್ಟು ಹಣಕಾಸು ನೆರವನ್ನು ಒದಗಿಸುತ್ತದೆ.

 

ರಾಷ್ಟ್ರೀಯ ಸೇವಾ ಯೋಜನಾ ಕೋಶದಲ್ಲಿ ನಿರ್ವಹಿಸುವ ಕಾರ್ಯದ ವಿವರ:

  1. ರಾಷ್ಟ್ರೀಯ ಸೇವಾ ಯೋಜನೆಯು ಕೇಂದ್ರ ಸರ್ಕಾರದ ಯೋಜನೆಯಾಗಿರುತ್ತದೆ. ಇದಕ್ಕೆ ಕೇಂದ್ರ ಸರ್ಕಾರವೇ ಸಂಪೂರ್ಣ ಅನುದಾನವನ್ನು ಬಿಡುಗಡೆ ಮಾಡುತ್ತದೆ. ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಸ್ವಯಂ ಸೇವಕರ ಅಳವಡಿಕೆಗೆ ಗುರಿ ನೀಡುತ್ತದೆ. ಈ ಗುರಿಯನ್ನು ರಾಜ್ಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯನ್ನು ಅಳವಡಿಸಿಕೊಂಡಿರುವ ವಿಶ್ವವಿದ್ಯಾನಿಲಯ ಮತ್ತು ನಿರ್ದೇಶನಾಲಯಗಳಿಗೆ ಅವರ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಅಗತ್ಯಕ್ಕನುಗುಣವಾಗಿ ಸ್ವಯಂಸೇವಕರ ಅಳವಡಿಕೆ ಗುರಿಯನ್ನು ನೀಡುವುದು. .
  2. ಕೇಂದ್ರ ಸರ್ಕಾರವು ನೀಡಿದ ಸ್ವಯಂಸೇವಕರ ಅಳವಡಿಕೆ ಗುರಿಗೆ ಅನುಗುಣವಾಗಿ ಬಿಡುಗಡೆ  ಮಾಡುವ ಅನುದಾನವನ್ನು ವಿಶ್ವವಿದ್ಯಾನಿಲಯಗಳಿಗೆ ಮತ್ತು ನಿರ್ದೇಶನಾಲಯಗಳಿಗೆ  ಸ್ವಯಂಸೇವಕರ ಗುರಿಗೆ ಅನುಗುಣವಾಗಿ ಅನುದಾನವನ್ನು ಅಪರ ಮುಖ್ಯ ಕಾರ್ಯದರ್ಶಿಗಳಿಂದ ಅನುಮೋದನೆ ಪಡೆದುಕೊಂಡು ಬಿಡುಗಡೆ ಮಾಡುವುದು
  3. ರಾಷ್ಟ್ರೀಯ ಭಾವೈಕ್ಯತಾ ಶಿಬಿರಗಳನ್ನು ಏರ್ಪಡಿಸುವಂತೆ ವಿಶ್ವವಿದ್ಯಾನಿಲಯ/ನಿರ್ದೇಶನಾಲಯಗಳಿಗೆ ಸೂಚಿಸುವುದು.
  4. ವಿಶೇಷ ಶಿಬಿರಗಳನ್ನು ಅರಿವು ಮೂಡಿಸುವ ಕಾರ್ಯಾಗಾರಗಳನ್ನು ಏರ್ಪಡಿಸಲು ವಿಶ್ವವಿದ್ಯಾನಿಲಯ/ ನಿರ್ದೇಶನಾಲಯಗಳಿಗೆ ಸೂಚಿಸುವುದು.
  5. ರಾಜ್ಯ ಮಟ್ಟದ ಸಲಹಾ ಸಮಿತಿ ಸಭೆಯನ್ನು ಏರ್ಪಡಿಸಿ ಹಿಂದಿನ ಸಾಲಿನ ಕಾರ್ಯಕ್ರಮಗಳ ಅನುಷ್ಠಾನ ಬಗ್ಗೆ ವರದಿ ಸಲ್ಲಿಸಿ ಮತ್ತು ಚಾಲ್ತಿ ಸಾಲಿನಲ್ಲಿ ಅನುಷ್ಠಾನಗೊಳಿಸುವ ಕಾರ್ಯಕ್ರಮಗಳಿಗೆ ಅನುಮೋದನೆ ಪಡೆಯುವುದು.
  6. ಕಾರ್ಯಕ್ರಮ ಸಂಯೋಜನಾಧಿಕಾರಿಗಳ ಸಭೆ ಏರ್ಪಡಿಸಿ ಕಾರ್ಯಕ್ರಮಗಳ ಅನುಷ್ಠಾನ ಬಗ್ಗೆ ಅನುದಾನ ಬಳಕೆ ಬಗ್ಗೆ ಮತ್ತು ಲೆಕ್ಕ ಪತ್ರಗಳ ಸಲ್ಲಿಸುವ ಬಗ್ಗೆ ಪರಿಶೀಲಿಸುವುದು.
  7. ರಾಷ್ಟ್ರೀಯ ಸೇವಾ ಯೋಜನೆ  ಅಡಿ ಕಾರ್ಯ ನಿರ್ವಹಿಸುವ ಕಾರ್ಯಕ್ರಮ ಸಂಯೋಜನಾಧಿಕಾರಿಗಳಿಗೆ, ಕಾರ್ಯಕ್ರಮ ಅಧಿಕಾರಿಗಳಿಗೆ  ಮತ್ತು ಸ್ವಯಂಸೇವಕರನ್ನು ವಿಶ್ವವಿದ್ಯಾನಿಲಯ ಮಟ್ಟದಲ್ಲಿ, ರಾಜ್ಯ ಮಟ್ಟದಲ್ಲಿ ಆಯ್ಕೆ ಮಾಡಿ ಪ್ರಶಸ್ತಿ ಪುರಸ್ಕಾರ ನೀಡಲಾಗುವುದು ಮತ್ತು ರಾಷ್ಟ್ರ ಮಟ್ಟ ಪ್ರಶಸ್ತಿಗಾಗಿ ಆಯ್ದ ಅರ್ಹ ಸ್ವಯಂಸೇವಕರ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು.
  8. ರಾಜ್ಯ ಸರ್ಕಾರದ ಅನುದಾನದಲ್ಲಿ ರಾಜ್ಯ ಪ್ರಾಯೋಜಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಕಾಲಕಾಲಕ್ಕೆ ಕಾರ್ಯಕ್ರಮವಾರು ಸಕಾಲದಲ್ಲಿ ಬಿಡುಗಡೆ ಮಾಡುವುದು.
  9. ವಿಧಾನ ಮಂಡಲ ಅಧಿವೇಶನಕ್ಕೆ ಸಂಬಂಧಿಸಿದಂತೆ ವಿಧಾನಸಭೆ./ವಿಧಾನ ಪರಿಷತ್ ಪ್ರಶ್ನೆಗಳಿಗೆ ಉತ್ತರ ಇಲಾಖೆಯ ಕಾರ್ಯದರ್ಶಿಗಳಿಗೆ ಸಲ್ಲಿಸುವುದು.
  10. ಮಾಹಿತಿ ಹಕ್ಕು ಅರ್ಜಿಗೆ ಸಂಬಂಧಿಸಿದಂತೆ ಮಾಹಿತಿ ನೀಡುವುದು. ಇಲಾಖೆಯಲ್ಲಿ ನಡೆಯುವ  ಎಂಪಿಕ್ ಸಭೆಗೆ ಸಕಾಲದಲ್ಲಿ ಮಾಹಿತಿ ನೀಡುವುದು.
  11. ಸಚಿವಾಲಯಕ್ಕೆ ಕಾಲಕಾಲಕ್ಕೆ ಅಗತ್ಯವಿರುವ ಮಾಹಿತಿಯನ್ನು ಒದಗಿಸುವುದು.
  12. ಮೇಲ್ಕಂಡ ವಿಷಯಗಳ ನಿರ್ವಹಣೆಗೆ  ನಿರ್ವಹಿಸುವ ಕಡತ/ದಾಖಲೆಗಳಲ್ಲಿ ನಿರ್ವಹಿಸುವ ಮೂರು ಅಕ್ಷರಗಳ  ಸೂಚಿ ಪದಗಳು (ಖಿಡಿiಟಚಿಣeಡಿiಚಿಟ Iಟಿಜex).
  13. ರಾಷ್ಟ್ರೀಯ ಸೇವಾ ಯೋಜನಾ ಕೋಶದಲ್ಲಿ ಸ್ರುಷ್ಟಿಸಿ ಮುಕ್ತಾಯಗೊಂಡಿರುವ ಕಡತಗಳ ವಿವಿರಗಳನ್ನು ನೀಡಲಾಗಿದೆ.
  14. ರಾಷ್ಟ್ರೀಯ ಸೇವಾ ಯೋಜನೆಗೆ ಸಂಬಂಧಿಸಿದಂತೆ ಆಯವ್ಯಯ ತಯಾರಿಕೆ, ಸಿಎಜಿ ಕಂಡಿಕೆಗಳಿಗೆ ಸಮಂಜಸ ಉತ್ತರನೀಡಿ ತಪ್ಪು ತಿಳುವಳಿಕೆಯನ್ನು ಸರಪಡಿಸುವುದು.
  15. ಕಾಲಕಾಲಕ್ಕೆ ವಿಶ್ವವಿದ್ಯಾನಿಲಯ/ನಿರ್ದೇಶನಾಲಯಗಳಲ್ಲಿ  ನಡೆಯುವ  ಸಭೆಗಳಿಗೆ ಹಾಜರಾಗುವುದು.
  16. ಕಾಲಕಾಲಕ್ಕೆ ವಿಶ್ವವಿದ್ಯಾನಿಲಯ/ನಿರ್ದೇಶನಾಲದಗಳಿಗೆ ಭೇಟಿ ನೀಡಿ ರಾಷ್ಟ್ರೀಯ ಸೇವಾ ಯೋಜನಾ ಕೋಶದಿಂದ ಬಿಡುಗಡೆಯಾದ ಅನುದಾನದ ಸದುಪಯೋಗದ ಬಗ್ಗೆ ಪರಿಶೀಲಿಸುವುದು

 

 

 

ಇತ್ತೀಚಿನ ನವೀಕರಣ​ : 14-10-2019 01:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸೇವಾ ಯೋಜನೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080