ಅಭಿಪ್ರಾಯ / ಸಲಹೆಗಳು

ಸಾಂಸ್ಥಿಕ ರಚನೆ

ರಾಷ್ಟ್ರೀಯ ಮಟ್ಟದಲ್ಲಿ ಆಡಳಿತ ವ್ಯವಸ್ಥೆಯ ಸ್ವರೂಪ:

ರಾಷ್ಟ್ರೀಯ ಮಟ್ಟ:

 1. ಯುವವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯ, ನವದೆಹಲಿ ಮತ್ತು ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರಗಳು:
 • ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯವು ಎನ್ಎಸ್ಎಸ್ನ ನೋಡಲ್ ಮಂತ್ರಾಲಯವಾಗಿದೆ ಮತ್ತು ಇದಕ್ಕೆ ಎನ್ಎಸ್ಎಸ್ ಕಾರ್ಯಕ್ರಮದ ಕಾರ್ಯನೀತಿ ಯೋಜನೆ, ಅನುಷ್ಠಾನ ಮತ್ತು ಮೌಲ್ಯಮಾಪನದ ಆಡಳಿತ ಹೊಣೆಗಾರಿಕೆಯನ್ನು ನೀಡಲಾಗಿದೆ.
 • ರಾಷ್ಟ್ರೀಯ ಸೇವಾ ಪರಿಯೋಜನೆಯು ಯುವ ವ್ಯವಹಾರಗಳು ಮತ್ತು ಕ್ರೀಡಾ  ಮಂತ್ರಾಲಯದ ಅಧಿಕಾರ ವ್ಯಾಪ್ತಿ ಅಡಿಯಲ್ಲಿದ್ದು, ಇದನ್ನು ಕಾರ್ಯಕ್ರಮದ ಆಡಳಿತ ಮತ್ತು ಅನುಷ್ಠಾನಕ್ಕೆ ಸಂಬಂಧಪಡುವಷ್ಟರಮಟ್ಟಿಗೆ ಜಂಟಿ ಕಾರ್ಯದರ್ಶಿ ದರ್ಜೆ ಹಿರಿಯ ಅಧಿಕಾರಿ ನೋಡಿಕೊಳ್ಳುತ್ತಾರೆ.
 1. ಕ್ರಾರ್ಯಕ್ರಮಸಲಹೆಗಾರ: 
 • ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯದಲ್ಲಿ, ಹಿರಿಯ ಅಧಿಕಾರಿಯನ್ನು ಕಾರ್ಯಕ್ರಮದ ಸಲಹೆಗಾರರನ್ನಾಗಿ ನಿಯೋಜಿಸಲಾಗಿದೆ. ಕಾರ್ಯಕ್ರಮದ ಸಲಹೆಗಾರ ಮತ್ತು ಎನ್ಎಸ್ಎಸ್ ಸಂಘಟನೆಯ ಮುಖ್ಯಸ್ಥರ ಪ್ರಕಾರ್ಯಗಳು ಈ ಮುಂದಿನಂತಿವೆ:-
 • ಎಲ್ಲಾ ಅಂಶಗಳಲ್ಲೂ ಎನ್ಎಸ್ಎಸ್ ಕಾರ್ಯಕ್ರಮದ ಬೆಳವಣಿಗೆಗಾಗಿ ಮಂತ್ರಾಲಯಕ್ಕೆ ಸಲಹೆ ನೀಡುವುದು
 • ಎನ್ಎಸ್ಎಸ್ ಕಾರ್ಯಕ್ರಮಗಳನ್ನು ಯೋಜಿಸಲು ಮತ್ತು ಅನುಷ್ಠಾನಗೊಳಿಸಲು ಮಂತ್ರಾಲಯಕ್ಕೆ ನೆರವು ನೀಡುವುದು
 • ರಾಜ್ಯ ಸರ್ಕಾರಗಳು, ವಿಶ್ವವಿದ್ಯಾನಿಲಯಗಳೊಂದಿಗೆ ಹಾಗೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕಾರ್ಯಕ್ರಮದ ಬೆಳವಣಿಗೆ ಮತ್ತು ಅಭಿವೃದ್ಧಿಯಲ್ಲಿ ನೆರವು ನೀಡಬಹುದಾಗಿರುವ ಇತರ ಸಂಘಟನೆಗಳೊಂದಿಗೆ ಸಂಪರ್ಕವನ್ನು ಹೊಂದಿರುವುದು
 • ಟಿಓಸಿಗಳು/ಟಿಓಆರ್ಸಿಗಳ ಮುಖಾಂತರ ಮುಖ್ಯ ವ್ಯಕ್ತಿಗಳು ಮತ್ತು ಕಾರ್ಯಕ್ರಮ ಅಧಿಕಾರಿಗಳ ತರಬೇತಿಗೆ ಏರ್ಪಾಡುಗಳನ್ನು ಮಾಡುವುದು.
 • ಟಿಓಆರ್ಸಿಗಳು ಅಥವಾ ಇತರ ಸೂಕ್ತ ಏಜೆನ್ಸಿಗಳ ಮೂಲಕ ಕಾಲಕಾಲಕ್ಕೆ  ಎನ್ಎಸ್ಎಸ್ ಮೌಲ್ಯಮಾಪನಕ್ಕಾಗಿ ಏರ್ಪಾಡುಗಳನ್ನು ಮಾಡುವುದು.
 • ಎನ್ಎಸ್ಎಸ್ಗೆ ಸಂಬಂಧಿಸಿದಂತೆ ಸಂಶೋಧನೆ ಮತ್ತು ಪ್ರಕಟಣೆ ಕಾರ್ಯಕ್ಕೆ  ಪ್ರೋತ್ಸಾಹ ನೀಡುವುದು.
 • ಕಾರ್ಯಕ್ರಮದ ಅನುಷ್ಠಾನದ ಬಗ್ಗೆ ರಾಜ್ಯವಾರು, ವಿಶ್ವವಿದ್ಯಾನಿಲಯವಾರು ದಾಖಲೆಯ ನಿರ್ವಹಣೆಯನ್ನು ನೋಡಿಕೊಳ್ಳುವುದು.
 • ದೇಶದ ವಿವಿಧ ಪ್ರದೇಶಗಳು/ರಾಜ್ಯಗಳಲ್ಲಿ ಇಲಾಖೆಯು ಸ್ಥಾಪಿಸಿರುವ ಎನ್ಎಸ್ಎಸ್  ಪ್ರಾದೇಶಿಕ ಕೇಂದ್ರದ ಕಾರ್ಯನಿರ್ವಹಣೆಯ ಮೇಲ್ವಿಚಾರಣೆ ಮಾಡುವುದು.

 1. ಕಾರ್ಯಕ್ರಮ ಸಲಹೆಗಾರರ ಕೋಶ:
 • ವಿವಿಧ ಮಟ್ಟಗಳಲ್ಲಿ ಎನ್ಎಸ್ಎಸ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು, ಮೇಲ್ವಿಚಾರಣೆ ಮಾಡುವುದು ಮತ್ತು ಮೌಲ್ಯಮಾಪನ ಮಾಡುವುದಕ್ಕಾಗಿ ಕಾರ್ಯಕ್ರಮ ಸಲಹೆಗಾರನಿಗೆ ನೆರವಾಗಲು ಸಚಿವಾಲಯವು ಕಾರ್ಯಕ್ರಮ ಸಲಹೆಗಾರರ ಕೋಶವನ್ನು ಸ್ಥಾಪಿಸಿದೆ. ಈ ಕಾರ್ಯಕ್ರಮ ಸಲಹೆಗಾರರ ಕೋಶಕ್ಕೆ ಕಾರ್ಯಕ್ರಮ ಉಪ ಸಲಹೆಗಾರ ಮತ್ತು ಮುಖ್ಯ ಬೆಂಬಲಿಗ ಸಿಬ್ಬಂದಿಯು ಮುಖ್ಯಸ್ಥರಾಗಿರುತ್ತಾರೆ. ಕೋಶವು ರಾಜ್ಯಗಳು, ವಿಶ್ವವಿದ್ಯಾಲಯಗಳು ಮತ್ತು ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರಗಳಿಂದ ದತ್ತಾಂಶ ಸಂಗ್ರಹಣೆ ಮತ್ತು ಸಂಕಲನಕ್ಕಾಗಿ ಕಾರ್ಯಕ್ರಮ ಮೇಲ್ವಿಚಾರಣೆ ಕೇಂದ್ರವಾಗಿಯೂ ಸಹ ಕಾರ್ಯನಿರ್ವಹಿಸುತ್ತದೆ ಮತ್ತು ಈ ಮಾಹಿತಿಯನ್ನು ಮರು-ಮಾಹಿತಿಯಾಗಿ ಕೇಂದ್ರ ಸರ್ಕಾರದ ಮಂತ್ರಾಲಯಕ್ಕೆ ನೀಡುತ್ತದೆ. ಹೀಗೆ ಕಾರ್ಯಕ್ರಮ ಸಲಹಾ ಕೋಶವು ಎಲ್ಲಾ ವಾಸ್ತವಿಕ ಉದ್ದೇಶಕ್ಕಾಗಿ ಎನ್ಎಸ್ಎಸ್ ಕೇಂದ್ರ ಕಚೇರಿಯಂತೆ ಕಾರ್ಯನಿರ್ವಹಿಸುತ್ತದೆ.
 1. ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರಗಳು:
 • ಯುವ ವ್ಯವಹಾರಗಳು ಮತ್ತು ಕ್ರೀಡಾ ಮಂತ್ರಾಲಯವು, ಎನ್ಎಸ್ಎಸ್  ಕಾರ್ಯಕ್ರಮದ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಗಳು, ವಿಶ್ವವಿದ್ಯಾನಿಲಯಗಳ +2 ಕೌನ್ಸಿಲ್ಗಳು ಮತ್ತು ಟಿಓಸಿ/ಟಿಓಆರ್ಸಿ - ಇವುಗಳೊಂದಿಗೆ ಸಂಪರ್ಕವನ್ನು ನಿರ್ವಹಿಸಲು ದೇಶದಲ್ಲಿ ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರಗಳನ್ನು ಸ್ಥಾಪಸಿದೆ;
 • ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರವು (ಆರ್ಸಿ), ಯುವ ವ್ಯವಹಾರಗಳು ಮತ್ತು ಕ್ರೀಡಾ  ಮಂತ್ರಾಲಯದ ಅಧೀನ ಕ್ಷೇತ್ರ ಕಚೇರಿಯಾಗಿದ್ದು ಇದು ಸ್ವಯಂಸೇವಕರ ಸಂಖ್ಯೆ  ಮತ್ತು ರಾಜ್ಯದ ವಿಸ್ತಾರದ ಮೇಲೆ ಅವಲಂಬಿಸಿರುತ್ತದೆ. ಆರ್ಸಿಯು ಉಪ ಕಾರ್ಯಕ್ರಮ  ಸಲಹೆಗಾರನಿಂದಾಗಲಿ ಅಥವಾ ಸಹಾಯಕ ಕಾರ್ಯಕ್ರಮ ಸಲಹೆಗಾರನಿಂದಾಗಲಿ ಅವರ  ಮುಂದಾಳತ್ವದಿಂದ ನಡೆಯುತ್ತದೆ. ಉಪ ಕಾರ್ಯಕ್ರಮ ಸಲಹೆಗಾರ/ ಸಹಾಯಕ ಕಾರ್ಯಕ್ರಮ ಸಲಹೆಗಾರನು ಕೇಂದ್ರ ಸರ್ಕಾರಿ ಸೇವೆಯ ಗ್ರೂಪ್-ಎ ದರ್ಜೆಗೆ ಸೇರಿದವನಾಗಿರುತ್ತಾನೆ.
 • ಪ್ರಾದೇಶಿಕ ಕೇಂದ್ರದ ಮುಂದಾಳತ್ವ ಹೊಂದಿರುವ ಉಪ-ಕಾರ್ಯಕ್ರಮ ಸಲಹೆಗಾರ/ ಸಹಾಯಕ ಕಾರ್ಯಕ್ರಮ ಸಲಹೆಗಾರನಿಗೆ/ಳಿಗೆ ಮುಖ್ಯ ಸಿಬ್ಬಂದಿಯು ನೆರವನ್ನು ನೀಡುತ್ತದೆ.
 1. ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರಗಳ ಪ್ರಕಾರ್ಯಗಳು:
 • ಇದರ ಜೊತೆಗೆ, ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರಗಳು ಟಿಓಸಿಗಳು/ಟಿಓಆರ್ಸಿಗಳು ಮತ್ತು ರಾಜ್ಯ ಸಂಪರ್ಕ ಕೋಶ ಇವುಗಳೊಂದಿಗೆ ನಿಕಟ ಸಮನ್ವಯದಲ್ಲಿ ಕಾರ್ಯನಿರ್ವಹಿಸುತ್ತವೆ. ರಾಜ್ಯ ಸರ್ಕಾರಗಳು, ವಿಶ್ವವಿದ್ಯಾನಿಲಯಗಳು ಮತ್ತುಟಿಓಸಿ/ಟಿಓಆರ್ಸಿಗಳಿಗೆ ಸಂಬಂಧಿಸಿದಂತೆ ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರಗಳ ಪ್ರಕಾರ್ಯಗಳು ಈ ಮುಂದಿನಂತಿವೆ:  
 1. ಹೊಣೆಗಾರಿಕೆ ಮತ್ತು ಉತ್ತರದಾಯಿತ್ವ:
 • ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರಗಳು ಕೇಂದ್ರ ಸರ್ಕಾರದ ಮಂತ್ರಾಲಯದ ಅಧೀನ ಕ್ಷೇತ್ರ ಕಚೇರಿಗಳಾಗಿರುವುದರಿಂದ, ಕಾಲಕಾಲಕ್ಕೆ ಭಾರತ ಸರ್ಕಾರದಿಂದ ಹೊರಡಿಸಿರುವ ಕೈಪಿಡಿ ಮತ್ತು ಮಾರ್ಗಸೂಚಿಗಳ ಅಕ್ಷರಶಃ ಹಾಗೂ ಭಾವಶಃ ಇದರ ಪ್ರಕಾರ ಎನ್ಎಸ್ಎಸ್ ಮತ್ತು ಇತರ ಯುವ ಕಾರ್ಯಕ್ರಮಗಳ ಅನುಷ್ಠಾನವನ್ನು ಖಚಿತಪಡಿಸುವುದು ಅವುಗಳ ಮುಖ್ಯ ಹೊಣೆಗಾರಿಕೆಯಾಗಿರುತ್ತದೆ.
 • ಪ್ರಾದೇಶಿಕ ಕೇಂದ್ರಗಳ ಮುಖ್ಯಸ್ಥರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಶೇಷವಾಗಿ, ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ವಿಸ್ತರಣೆ ಮತ್ತು ವಿವರಣೆಯನ್ನು ಒದಗಿಸುವಲ್ಲಿ ಯಾವುದೇ ಆತಂಕ ಮತ್ತು ಪಕ್ಷಪಾತವಿಲ್ಲದೆ ಸರ್ಕಾರಿ ಕಾರ್ಯನೀತಿಗಳನ್ನು ವಿವರಿಸುವುದು ಅವರ ಕರ್ತವ್ಯವಾಗಿದೆ. ಪ್ರಾದೇಶಿಕ ಕೇಂದ್ರಗಳ  ಮುಖ್ಯಸ್ಥರು ವಿಶ್ವವಿದ್ಯಾಲಯಗಳ ಮತ್ತು/ಅಥವಾ ರಾಜ್ಯದ ಒತ್ತಡದಲ್ಲಿ ಮೌನವಾಗಿರುವಂತಿಲ್ಲ.
 • ರಾಜ್ಯ ಸರ್ಕಾರವು,- 
 1. ಎನ್ಎಸ್ಎಸ್ ಮತ್ತು ಇತರ ಯುವ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನಕ್ಕಾಗಿ ರಾಜ್ಯ ಸರ್ಕಾರಗಳಿಗೆ ಎನ್ಎಸ್ಎಸ್ ಮತ್ತು ಇತರ ಯುವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಂತ್ರಾಲಯದ ಕಾರ್ಯನೀತಿಗಳನ್ನು ವಿವರಿಸುವುದು;
 2. ಈ ಕ್ಷೇತ್ರದಲ್ಲಿ ಎನ್ಎಸ್ಎಸ್ ಕಾರ್ಯಕ್ರಮದ ಅನುಷ್ಠಾನದಲ್ಲಿರುವ ಅಡಚಣೆಗಳನ್ನು ನಿವಾರಿಸಲು ಪ್ರಯತ್ನಿಸುವುದು.
 3. ಎನ್ಎಸ್ಎಸ್ ಕಾರ್ಯಚಟುವಟಿಕೆಗಳ ವೇಳಾಪಟ್ಟಿ ಪ್ರಕಾರ ಅನುಷ್ಠಾನಗೊಳ್ಳುವಂತೆ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು ಶಾಲೆಗಳಿಗೆ ಕೇಂದ್ರ ಮತ್ತು ರಾಜ್ಯದ ಪಾಲನ್ನು ಒಳಗೊಂಡಂತೆ ಅನುದಾನಗಳುಸಕಾಲದಲ್ಲಿ ತಲುಪುವಂತೆ ನೋಡಿಕೊಳ್ಳುವುದು.
 4. ಎನ್ಎಸ್ಎಸ್ ಪ್ರಾದೇಶಿಕ ಕೇಂದ್ರವು, ಅಗತ್ಯವಾದಾಗೆಲ್ಲ ಎನ್ಎಸ್ಎಸ್ ಮತ್ತು ಭಾರತ ಸರ್ಕಾರದ ಯುವ ಕಾರ್ಯಕ್ರಮದ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅವುಗಳ ಬೇರೆ ಬೇರೆ ರೂಪಗಳಲ್ಲಿ ಆಗುತ್ತಿರುವ ಇತ್ತೀಚಿನ ಬೆಳವಣಿಗೆ ಬಗ್ಗೆ ರಾಜ್ಯ ಸರ್ಕಾರಗಳಿಗೆ ಮಾಹಿತಿ ನೀಡುತ್ತಿರುತ್ತದೆ.
 5. ಲೆಕ್ಕಪತ್ರಗಳು ಮತ್ತು ಇತರ ವರದಿಗಳನ್ನು ಕಳುಹಿಸುವುದನ್ನು ತ್ವರಿತಗೊಳಿಸುವುದಕ್ಕಾಗಿ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವುದು.
 6. ಎನ್ಎಸ್ಎಸ್ ಕಾರ್ಯಕ್ರಮದ ಸರಿಯಾದ ಅನುಷ್ಠಾನ ಮತ್ತು ಸಕಾಲದಲ್ಲಿ ಕ್ರಮ ಕೈಗೊಳ್ಳುವುದಕ್ಕಾಗಿ ರಾಜ್ಯ ಸಂಪರ್ಕಾಧಿಕಾರಿಯೊಂದಿಗೆ ಜತೆಯಾಗಿ ಕಾರ್ಯನಿರ್ವಹಿಸುವುದು.

 • ರಾಜ್ಯ ಎನ್ಎಸ್ಎಸ್ ಕೋಶದ ಪ್ರಕಾರ್ಯಗಳು: 
 • ರಾಜ್ಯ ಎನ್ಎಸ್ಎಸ್ ಕೋಶದ ಪ್ರಮುಖ ಪ್ರಕಾರ್ಯಗಳು ಈ ಮುಂದಿನಂತಿವೆ:
 • ರಾಜ್ಯ ಬಜೆಟ್ನಲ್ಲಿ ಎನ್ಎಸ್ಎಸ್ ಕಾರ್ಯಕ್ರಮಕ್ಕಾಗಿ ಬಜೆಟ್ ಏರ್ಪಾಡುಗಳನ್ನು ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳುವುದು.
 • ರಾಜ್ಯದಲ್ಲಿರುವ ಸಂಬಂಧಪಟ್ಟ ವಿಶ್ವವಿದ್ಯಾನಿಲಯಗಳಿಗೆ ಎನ್ಎಸ್ಎಸ್ ಸಂಖ್ಯಾಬಲವನ್ನು ಸಕಾಲಿಕವಾಗಿ ಹಂಚಿಕೆ ಮಾಡುವುದು.
 • ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳು/ +2 ಕೌನ್ಸಿಲ್ಗಳಿಗೆ ಸಕಾಲಿಕವಾಗಿ ಅನುದಾನಗಳನ್ನು ಬಿಡುಗಡೆ ಮಾಡುವುದು.
 • ಭಾರತ ಸರಕಾರಕ್ಕೆ, ಲೆಕ್ಕಪತ್ರಗಳು, ಜಮಾ-ಖರ್ಚು ತಃಖ್ತೆ ಹಾಗೂ ಕಾರ್ಯಕ್ರಮಗಳ ವರದಿಗಳನ್ನು ಸಲ್ಲಿಸುವುದು.
 • ಕಾಲಕಾಲಕ್ಕೆ ರಾಜ್ಯ ಎನ್ಎಸ್ಎಸ್ ಸಲಹಾ ಸಮಿತಿಯ ಸಭೆಗಳನ್ನು ಕರೆಯುವುದು
 • ವಿಶ್ವವಿದ್ಯಾನಿಲಯಗಳು/ +ಕೌನ್ಸಿಲ್ಗಳ ಮುಖಾಂತರ ಹಾಗೂ ಎನ್ಎಸ್ಎಸ್ನ ಪ್ರಾದೇಶಿಕ ಕೇಂದ್ರದೊಂದಿಗೆ ಸಮಾಲೋಚಿಸಿ ಕಾರ್ಯಕ್ರಮದ ಮೇಲ್ವಿಚಾರಣೆ ಮಾಡುವುದು.
 • ರಾಜ್ಯದಲ್ಲಿ ಎನ್ಎಸ್ಎಸ್ ಕಾರ್ಯಕ್ರಮದ ಬೆಳವಣೆಗೆಗಾಗಿ, ಬೆಳವಣಿಗೆ ಏಜೆನ್ಸಿಗಳು ಮತ್ತು ಇಲಾಖೆಗಳೊಂದಿಗೆ ಅನೋನ್ಯ ಸಂಬಂಧ ಕಲ್ಪಿಸುವುದು.

ವಿಶ್ವವಿದ್ಯಾನಿಲಯ ಮಟ್ಟದ ಆಡಳಿತ ವ್ಯವಸ್ಥೆ:

 • ರಾಷ್ಟ್ರೀಯ ಸೇವಾ ಪರಿಯೋಜನೆಯು ಉನ್ನತ ಶಿಕ್ಷಣ ಮಟ್ಟದಲ್ಲಿನ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ. ಹಾಗಾಗಿ ಉನ್ನತ ಶಿಕ್ಷಣ ಆಡಳಿತ ವ್ಯವಸ್ಥೆಯು ಎನ್ಎಸ್ಎಸ್ ಮತ್ತು ಕಾಲೇಜು/ ಶಾಲೆ/ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಅದರಅನುಷ್ಠಾನವನ್ನು ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಹೊಂದಿರುತ್ತದೆ. ವಿಶ್ವವಿದ್ಯಾನಿಲಯ ಮಟ್ಟದಲ್ಲಿನ ಎನ್ಎಸ್ಎಸ್ ಘಟಕದ ಯಶಸ್ವಿ ಕಾರ್ಯಕ್ರಮವು ಘಟಕಮಟ್ಟದಲ್ಲಿ ಎನ್ಎಸ್ಎಸ್ನ ಸರಿಯಾದ ಅನುಷ್ಠಾನಕ್ಕಾಗಿ ಉತ್ತೇಜನವನ್ನು ನೀಡುತ್ತದೆ.

 • ವಿಶ್ವವಿದ್ಯಾನಿಲಯ ಎನ್ಎಸ್ಎಸ್ ಕೋಶ : ಪ್ರತಿಯೊಂದು ವಿಶ್ವವಿದ್ಯಾನಿಲಯವು ಅದಕ್ಕೆ ಸಂಯೋಜನೆಗೊಂಡಿರುವ ಎಲ್ಲಾ ಕಾಲೇಜುಗಳಲ್ಲಿ ಎನ್ಎಸ್ಎಸ್ ಕಾರ್ಯಕ್ರಮದ ಮೇಲ್ವಿಚಾರಣೆ ಮತ್ತು ಸಮನ್ವಯಕ್ಕಾಗಿ ಒಂದು ಎನ್ಎಸ್ಎಸ್ ಕೋಶವನ್ನು ಹೊಂದಿರಬೇಕು.
  • 10000ಕ್ಕಿಂತ ಹೆಚ್ಚು ಎನ್ಎಸ್ಎಸ್ ಸ್ವಯಂಸೇವಕರ ಸಂಖ್ಯಾಬಲವನ್ನು ಹೊಂದಿರುವ ವಿಶ್ವವಿದ್ಯಾನಿಲಯಗಳು ಪೂರ್ಣಕಾಲಿಕ ಕಾರ್ಯಕ್ರಮ ಸಮನ್ವಯ ಅಧಿಕಾರಿಯನ್ನು ಹೊಂದಿರಬೇಕು. 10000ಕ್ಕಿಂತ ಕಡಿಮೆ ಎನ್ಎಸ್ಎಸ್ ಸ್ವಯಂ ಸೇವಕರ ಸಂಖ್ಯಾಬಲವನ್ನು ಹೊಂದಿರುವ ವಿಶ್ವವಿದ್ಯಾನಿಲಯಗಳು ಅರೆಕಾಲಿಕ ಕಾರ್ಯಕ್ರಮ ಸಮನ್ವಯ ಅಧಿಕಾರಿಯನ್ನು ಹೊಂದಿರಬಹುದು.
  • ಎನ್ಎಸ್ಎಸ್ ಒಂದು ಶೈಕ್ಷಣಿಕ ವಿಸ್ತರಣಾ ಕಾರ್ಯಕ್ರಮವಾಗಿರುವುದರಿಂದ, ವಿಶ್ವವಿದ್ಯಾನಿಲಯಕ್ಕೆ ಕೋಶದ ಸುಗಮ ಕಾರ್ಯಕ್ಕಾಗಿ ಅಗತ್ಯ ಮೂಲಭೂತ ಸೌಲಭ್ಯಗಳು ಹಾಗೂ ಇತರ ಸೌಲಭ್ಯಗಳಾದ ದೂರವಾಣಿ, ಕಚೇರಿ ಮತ್ತುಕಚೇರಿಯ ಸಲಕರಣೆಗಳನ್ನು ಮತ್ತು ಸಚಿವಾಲಯ ಸಹಾಯವನ್ನು ನೀಡಲಾಗುತ್ತದೆ.
  • ಕೋಶವು, ಕುಲಪತಿಯ ಅಡಿಯಲ್ಲಿ ಕಾರ್ಯನಿರ್ವಹಿಸಲಿದ್ದು, ಕಾರ್ಯಕ್ರಮ ಸಮನ್ವಯ ಅಧಿಕಾರಿ ಎನ್ಎಸ್ಎಸ್, ಇವರು ಕೋಶದ ಪ್ರಭಾರಿ ಹಾಗೂ ಮುಖ್ಯ  ಕಾರ್ಯನಿರ್ವಾಹಕನಾಗಿರುತ್ತಾನೆ.

 • ಕಾರ್ಯಕ್ರಮ ಸಮನ್ವಯ ಅಧಿಕಾರಿ
 • ಕಾರ್ಯಕ್ರಮ ಸಮನ್ವಯ ಅಧಿಕಾರಿಯು ಎನ್ಎಸ್ಎಸ್ಗೆ ಸಂಬಂಧಪಡುವಷ್ಟರಮಟ್ಟಿಗೆ ಮುಖ್ಯ ಕಾರ್ಯನಿರ್ವಾಹಕನಾಗಿರುತ್ತಾನೆ. ಆದ್ದರಿಂದ ಸಮರ್ಪಣಾಭಾವ ಮತ್ತು ಶ್ರದ್ಧಾಭಾವವುಳ್ಳ ಕಾರ್ಯಕ್ರಮ ಸಮನ್ವಯ ಅಧಿಕಾರಿಯು, ಸರಿಯಾದ ದೃಷ್ಟಿಕೋನದಲ್ಲಿ ಎನ್ಎಸ್ಎಸ್ನ ಕಾರ್ಯಚಟುವಟಿಕೆಗಳ ಯೋಜನೆ ಜಾರಿ ಮತ್ತು ಮೌಲ್ಯಮಾಪನ ಮಾಡಬಹುದಾಗಿದೆ. ಕಾರ್ಯಕ್ರಮ ಸಮನ್ವಯ ಅಧಿಕಾರಿಯು, ಸರಕಾರದ ಎಲ್ಲಾ ಆಡಳಿತ ಮತ್ತು ಕಾರ್ಯನೀತಿ ನಿರ್ದೇಶನಗಳನ್ನು, ರಾಜ್ಯ ಸಲಹಾ ಸಮಿತಿ ಮತ್ತು ವಿಶ್ವವಿದ್ಯಾನಿಲಯ ಸಲಹಾ ಸಮಿತಿಯ ತಿರ್ಮಾನಗಳನ್ನು ಜಾರಿಗೊಳಿಸುವನು. ಎನ್ಎಸ್ಎಸ್ ಕಾರ್ಯಕ್ರಮವನ್ನು, ಭಾರತ ಸರಕಾರ ಹೊರಡಿಸಿದ ಮಾರ್ಗಸೂಚಿಗಳ ಹಿನ್ನಲೆಯಲ್ಲಿ ಸಿದ್ದಪಡಿಸಲಾಗುವುದು.

 • ಕಾರ್ಯಕ್ರಮ ಸಮನ್ವಯ ಅಧಿಕಾರಿಯ ಪದಾವಧಿ/ಅಧಿಕಾರಾವಧಿ: ಕಾರ್ಯಕ್ರಮ ಸಮನ್ವಯ ಅಧಿಕಾರಿಯನ್ನು ಹೆಚ್ಚಿನ ಒಂದು ವರ್ಷದವರೆಗೆ ವಿಸ್ತರಿಸಬಹುದಾದಂತೆ ಮೂರು ವರ್ಷಗಳ ಅವಧಿವರೆಗೆ ಪ್ರತಿನಿಯೋಜನೆ/ ಅಲ್ಪಕಾಲಿಕ ಕರಾರಿನ ಮೇಲೆ ನೇಮಕ ಮಾಡಲಾಗುತ್ತದೆ. ಯಾವುದೇ ಕಾರಣಕ್ಕಾಗಿ ಕಾರ್ಯಕ್ರಮ ಸಮನ್ವಯ ಅಧಿಕಾರಿಯನ್ನು ಖಾಯಂ ಆಧಾರದ ಮೇಲೆ ನೇಮಕ ಮಾಡಲಾಗುವುದಿಲ್ಲ.
 • ಕಾರ್ಯಕ್ರಮ ಸಮನ್ವಯ ಅಧಿಕಾರಿಯ ಪ್ರಕಾರ್ಯಗಳು
 • ಕಾಲೇಜು ಮಟ್ಟದಲ್ಲಿ ಎನ್ಎಸ್ಎಸ್ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಎನ್ಎಸ್ಎಸ್ ಘಟಕಕ್ಕೆ ನೆರವು ಮತ್ತು ಮಾರ್ಗದರ್ಶನವನ್ನು ಮಾಡುವುದು.
 • ಎನ್ಎಸ್ಎಸ್ ನಾಯಕರುಗಳಿಗೆ ಸಂಘಟನಾ ಶಿಬಿರಗಳು, ತರಬೇತಿ, ಹಾಗೂ ಅಭಿಶಿಕ್ಷಣ ಕಾರ್ಯಕ್ರಮಗಳನ್ನು ನಡೆಸುವಲ್ಲಿ ಸಹಾಯ ಮಾಡುವುದು.
 • ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಎನ್ಎಸ್ಎಸ್ ಘಟಕಗಳಿಗೆ ಭೇಟಿ ಕೊಡುವುದು.
 • ಎನ್ಎಸ್ಎಸ್ನ ನಿಯತ ಕಾರ್ಯಚಟುವಟಿಕೆಗಳು ಮತ್ತು ವಿಶೇಷ ಶಿಬಿರ ಕಾರ್ಯಗಳ ಅನುಷ್ಠಾನವನ್ನು ನೋಡಿಕೊಳ್ಳುವುದು;
 • ಕಾಲೇಜುಗಳಿಗೆ ಅನುದಾನಗಳು ಸಕಾಲದಲ್ಲಿ ಬಿಡುಗಡೆ ಆಗುವಂತೆ ನೋಡಿಕೊಳ್ಳುವುದು;
 • ಕಾರ್ಯಕ್ರಮ ಸಲಹೆಗಾರ, ಪ್ರಾದೇಶಿಕ ಕೇಂದ್ರ, ರಾಜ್ಯ ಸಂಪರ್ಕ ಅಧಿಕಾರಿ ಮತ್ತು ಇಟಿಪಿಗಳಿಗೆ ವರದಿಗಳು ಮತ್ತು ವಿವರಪಟ್ಟಿಕೆಗಳನ್ನು ಒಪ್ಪಿಸುವುದು;
 • ಮಾರ್ಗಸೂಚಿಗಳ ಪ್ರಕಾರ, ಹೊಸ ಕಾರ್ಯಕ್ರಮ ಅಧಿಕಾರಿಗಳು ಆಯ್ಕೆಯಾಗುವಂತೆ ನೋಡಿಕೊಳ್ಳುವುದು ಹಾಗೂ ಗೊತ್ತುಪಡಿಸಲಾದ ಅವಧಿಯೊಳಗೆ ಅವರ ಅಭಿಶಿಕ್ಷಣವಾಗುವಂತೆ ನೋಡಿಕೊಳ್ಳುವುದು;
 • ಭಾರತ ಸರಕಾರ, ಪ್ರಾದೇಶಿಕ ನಿರ್ದೇಶನಾಲಯ ಮತ್ತು ರಾಜ್ಯ ಎನ್ಎಸ್ಎಸ್ ಅಧಿಕಾರಿಗೆ ಅರ್ಧವಾರ್ಷಿಕ ವರದಿಗಳು ಮತ್ತು ಅಗತ್ಯಪಡಿಸಿದ ಇತರೆ ಮಾಹಿತಿಯನ್ನು ಗೊತ್ತುಪಡಿಸಲಾದ ನಮೂನೆ ಪತ್ರದಲ್ಲಿ ಸಲ್ಲಿಸುವುದು;
 • ಎನ್ಎಸ್ಎಸ್ ಕಾರ್ಯಕ್ರಮದ ಅನುಷ್ಠಾನಕ್ಕಾಗಿ, ಪ್ರಾದೇಶಿಕ ನಿರ್ದೇಶನಾಲಯ ಮತ್ತು ರಾಜ್ಯ ಎನ್ಎಸ್ಎಸ್ ಅಧಿಕಾರಿ ಹಾಗೂ ಇಟಿಐ ಇವುಗಳೊಂದಿಗೆ ಸಂಪರ್ಕ ಹೊಂದಿರುವುದು;
 • ಎನ್ಎಸ್ಎಸ್ನ ಸಾಧನೆಗಳ ಬಗ್ಗೆ ದಾಖಲೆಗಳು ಹಾಗೂ ವರದಿಗಳನ್ನು ಪ್ರಕಟಿಸುವುದು.

(ಸಿ) ಇಟಿಐಗಳು ಮತ್ತು ಮೌಲ್ಯಮಾಪನ ಎಜೆನ್ಸ

 • ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು +2 ವಿದ್ಯಾಲಯಗಳಲ್ಲಿ ತನ್ನ ಕಾರ್ಯಸಾಮಥ್ರ್ಯವನ್ನು ಸುಸ್ಥಿರಗೊಳಿಸುವುದಕ್ಕಾಗಿನ ಪ್ರಮುಖ ಪ್ರದೇಶ ಯೋಜನೆಗಾಗಿ, ಎನ್ಎಸ್ಎಸ್ಗೆ ಸೇರಿರುವ ವ್ಯಕ್ತಿಗಳ ಅಭಿಶಿಕ್ಷಣ ಮತ್ತು ತರಬೇತಿಯು ಪ್ರಮುಖ ಸಾಧನವಾಗಿರುವುದರಿಂದ ಕಾರ್ಯಕ್ರಮದ ಹಲವಾರು ವಾಸ್ತವಾಂಶಗಳನ್ನು ಕುರಿತು ಅಧ್ಯಯನ ಮಾಡುವುದು, ಅರ್ಥ ಮಾಡಿಕೊಳ್ಳುವುದು ಮತ್ತು ಮೌಲ್ಯಮಾಪನ ಮಾಡುವುದು ಅತ್ಯಾವಶ್ಯಕವಾಗಿದೆ. ಎನ್ಎಸ್ಎಸ್ ಪ್ರಾದೇಶಿಕ ನಿರ್ದೇಶನಾಲಯಗಳು, ಮುಖ್ಯವಾಗಿ ಈ ಕಾರ್ಯಕ್ಷೇತ್ರದಲ್ಲಿ ತಮ್ಮ ಪಾತ್ರವನ್ನು ವಹಿಸಬೇಕಾಗುತ್ತದೆ ಅಂದರೆ:-

 • ಅಭಿಶಿಕ್ಷಣ, ತರಬೇತಿ, ಸಂಶೋಧನೆ ಮತ್ತು ಮೌಲ್ಯಮಾಪನ ಹಾಗೂ ಈ ಸಂಸ್ಥೆಗಳಲ್ಲಿನ ಇತರೆ ಕಾರ್ಯಚಟುವಟಿಕೆಗಳ ಏರ್ಪಾಡನ್ನು ವೀಕ್ಷಿಸುವುದು;
 • ಸಾಧ್ಯವಾದಾಗಲೆಲ್ಲ ಅಂಥ ಕಡೆ ತರಬೇತಿ ಕಾರ್ಯಕ್ರಮಗಳಿಗೆ ಭೇಟಿ ನೀಡುವುದು ಮತ್ತು ಕಾರ್ಯನೀತಿಗಳು ಹಾಗೂ ಮಾರ್ಗಸೂಚಿಗಳು ಕುರಿತಂತೆ ಇಟಿಐಗಳಿಗೆ ಸಲಹೆ ನೀಡುವುದು;
 • ಅಭಿಶಿಕ್ಷಣ ಮತ್ತು ತರಬೇತಿ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸುವುದು;
 • ನಿಯತ ಮತ್ತು ವಿಶೇಷ ಶಿಬಿರ ಕಾರ್ಯಕ್ರಮಗಳ ಮೌಲ್ಯಮಾಪನದಲ್ಲಿ ಇಟಿಐಗಳಿಗೆ ಸಹಾಯ ಮಾಡುವುದು;
 • ತರಬೇತಿ ಸಲಹಾ ಸಮಿತಿಯ ಸದಸ್ಯರಾಗಿ ಇಟಿಐಗಳ ಪ್ರಗತಿಯ ಕುರಿತು ವರದಿ ಮಾಡುವುದು.

ಸಂಸ್ಥೆಯ ಮಟ್ಟದಲ್ಲಿ ಆಡಳಿತ ವ್ಯವಸ್ಥೆ

 • ಕಾಲೇಜು/ +2 ಮಟ್ಟದ ಘಟಕವು, ಎನ್ಎಸ್ಎಸ್ನಲ್ಲಿರುವ ಕೆಳಸ್ತರದ ಘಟಕವಾಗಿದೆ. ಸಂಸ್ಥೆಯು ಈ ಘಟಕದ ಮುಖಾಂತರ ಮಾತ್ರವೇ ಸಮುದಾಯ, ಆಡಳಿತ, ಯುವ ವಿದ್ಯಾರ್ಥಿ ಮತ್ತು ಬೋಧನಾಂಗ ಇವುಗಳೊಂದಿಗೆ ಸಂಪರ್ಕವನ್ನು ಇಟ್ಟುಕೊಂಡಿರಬೇಕು. ಆದ್ದರಿಂದ ಸಂಸ್ಥೆ ಹಾಗೂ ಎನ್ಎಸ್ಎಸ್ ಘಟಕದ ಆಡಳಿತ ಮಂಡಳಿಯ ಕಾರ್ಯನಿರ್ವಹಣೆಯು ಅತ್ಯಂತ ಮಹತ್ವವುಳ್ಳದ್ದಾಗಿದೆ.

 1. ಎನ್ಎಸ್ಎಸ್ ಘಟಕ
 • ವಿದ್ಯಾರ್ಥಿಗಳ ಸಂಖ್ಯಾಬಲಕ್ಕೆ ಅನುಸಾರವಾಗಿ ಒಂದು ಸಂಸ್ಥೆಗೆ ಎನ್ಎಸ್ಎಸ್ ಘಟಕವನ್ನು ಹಂಚಿಕೆ ಮಾಡಲಾಗುವುದು. ಸಂಸ್ಥೆಯ ಬೇಡಿಕೆಗಳನ್ನು ಪರಿಗಣಿಸಿ, ಎನ್ಎಸ್ಎಸ್ನ ಪ್ರಾದೇಶಿಕ ನಿರ್ದೇಶನಾಲಯ ಮತ್ತು ರಾಜ್ಯ ಎನ್ಎಸ್ಎಸ್ನ ಅಧಿಕಾರಿಯೊಂದಿಗೆ ಸಮಾಲೋಚಿಸಿ ಕಾರ್ಯಕ್ರಮ ಸಮನ್ವಯ ಅಧಿಕಾರಿಯಿಂದ ಘಟಕಗಳ ಸಂಖ್ಯೆಯನ್ನು ಹಂಚಿಕೆ ಮಾಡಲಾಗುವುದು. ಸಂಸ್ಥೆಗೆ ಎನ್ಎಸ್ಎಸ್ ಘಟಕವನ್ನು ಯಶಸ್ವಿಯಾಗಿ ನಡೆಸುವುದಕ್ಕಾಗಿ ಅವಶ್ಯವಾಗಿರುವ ಮೂಲ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ಭಾವಿಸಲಾಗಿದೆ, ಏಕೆಂದರೆ ಇದು ಸಂಸ್ಥೆಯ ಅಂದರೆ ಕಾಲೇಜು ಅಥವಾ ಶಾಲೆಯ ಒಂದು ಅವಿಭಾಜ್ಯ ಅಂಗವಾಗಿರುತ್ತದೆ.

 • ಒಂದು ಘಟಕದ ಸಂಖ್ಯಾಬಲವು, ಸಾಧಾರಣವಾಗಿ 100 ಎನ್ಎಸ್ಎಸ್ ಸ್ವಯಂಸೇವಕರನ್ನು ಒಳಗೊಂಡಿರುತ್ತದೆ. ನಿರ್ಬಂಧಗಳ ಕಾರಣದಿಂದಾಗಿ ಎರಡನೆಯ ಘಟಕಕ್ಕೆ ಏರಿಸಲು ಸಾಧ್ಯವಾಗದಿರುವಲ್ಲಿ, ಅಸಾಧಾರಣ ಸಂದರ್ಭಗಳಲ್ಲಿ, ಎನ್ಎಸ್ಎಸ್ ಸಂಖ್ಯಾಬಲವನ್ನು 120 ಸ್ವಯಂಸೇವಕರವರೆಗೂ ವಿಸ್ತರಿಸುವಂತಿರುತ್ತದೆ. ಹೆಚ್ಚು ಸ್ವಯಂಸೇವಕರನ್ನು ಸೇರಿಸಿಕೊಳ್ಳುವ ಬದಲು ಒಂದು ಪ್ರತ್ಯೇಕ ಘಟಕವನ್ನು ಪ್ರಾರಂಭಿಸಬೇಕೆಂಬುದಕ್ಕೆ ಪ್ರಾಶಸ್ತ್ಯವನ್ನು ಕೊಡಬಹುದಾಗಿದೆ.
 • ಎನ್ಎಸ್ಎಸ್ಗೆ ಸೇರಿಸಿಕೊಂಡ ವಿದ್ಯಾರ್ಥಿಗಳ ಒಟ್ಟು ಸಂಖ್ಯಾಬಲವು ತುಂಬಾ ಕಡಿಮೆ ಇರುವ ಅಸಾಧಾರಣ ಸಂದರ್ಭಗಳಲ್ಲಿ, 75 ಎನ್ಎಸ್ಎಸ್ ಸ್ವಯಂಸೇವಕರ ಸಂಖ್ಯಾಬಲದೊಂದಿಗೆ ಒಂದು ಚಿಕ್ಕ ಎನ್ಎಸ್ಎಸ್ ಘಟಕವನ್ನು ಪ್ರಾರಂಭಿಸಬಹುದಾಗಿದೆ.

 1. ಎನ್ಎಸ್ಎಸ್ ಸ್ವಯಂಸೇವಕರ ಸೇರ್ಪಡೆ
 • ಕಾಲೇಜು ಮಟ್ಟದಲ್ಲಿ ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ತರಗತಿ ವಿದ್ಯಾರ್ಥಿಗಳಿಂದ ಎನ್ಎಸ್ಎಸ್ ಸ್ವಯಂ ಸೇವಕರನ್ನು ಸೇರ್ಪಡೆ ಮಾಡಿಕೊಳ್ಳಲಾಗುವುದು. +2 ಮಟ್ಟದಲ್ಲಿ ಎನ್ಎಸ್ಎಸ್ ಸ್ವಯಂ ಸೇವಕರಾಗಿ ಕೆಲಸ ಮಾಡಿರುವಂತಹ ವಿದ್ಯಾರ್ಥಿಗಳಿಗೂ ಕೂಡ ಪ್ರಾಮುಖ್ಯತೆಯನ್ನು ನೀಡಬೇಕು.
  • ಅಲ್ಪಸಂಖ್ಯಾತ ಸಮುದಾಯಗಳು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿರುವ ವಿದ್ಯಾರ್ಥಿಗಳು ಎನ್ಎಸ್ಎಸ್ನಲ್ಲಿ ಭಾಗವಹಿಸಲು ಪ್ರೋತ್ಸಾಹ ನೀಡಬೇಕು. ಎನ್ಎಸ್ಎಸ್ಗೆ ಸೇರಲು ಹೆಚ್ಚು ವಿದ್ಯಾರ್ಥಿಗಳು ಬಯಸಿದಲ್ಲಿ ಅವರಿಗೆ ಪ್ರಾತಿನಿಧ್ಯವನ್ನು ನೀಡಬೇಕು.
  • ಸಹ ಶಿಕ್ಷಣ ಕಾಲೇಜುಗಳಲ್ಲಿ ಬಾಲಕಿಯರು ಎನ್ಎಸ್ಎಸ್ಗೆ ಸೇರುವಂತೆ ಅವರಲ್ಲಿ ಆಸಕ್ತಿ ಹುಟ್ಟಿಸಬೇಕು.
  • ಭಾರತದ ವಿಶ್ವವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳು ಸಹ ಎನ್ಎಸ್ಎಸ್ಗೆ ಸೇರಲು ಪ್ರೋತ್ಸಾಹಿಸಬೇಕು. ಇದರಿಂದಾಗಿ ಅವರು ರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಸಮುದಾಯ ಕಾರ್ಯದಅನುಭವಗಳನ್ನು ಹಂಚಿಕೊಳ್ಳುವಂತಿರುತ್ತದೆ.
  • ಎನ್ಸಿಸಿ ಕೆಡೆಟ್ಗಳನ್ನು ಎನ್ಎಸ್ಎಸ್ಗೆ ಸೇರಿಸಿಕೊಳ್ಳಲು ಅವಕಾಶವಿರುವುದಿಲ್ಲ. ಅದೇ ರೀತಿಯಾಗಿ, ಎನ್ಎಸ್ಎಸ್ ಸ್ವಯಂಸೇವಕರು ಎನ್ಸಿಸಿ ಅಥವಾ ಎನ್ಎಸ್ಎಸ್ನಲ್ಲಿ ಇರುವವರೆಗೂ ಯಾವುದೇ ಇತರೆ ಯುವ ಸಂಘಟನೆಯಲ್ಲಿ ಭಾಗವಹಿಸುವಂತಿಲ್ಲ. ಇದೇ ನಿರ್ಬಂಧವು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಗಳಿಗೂ ಸಹ ಅನ್ವಯವಾಗುತ್ತದೆ.

 1. ಕಾರ್ಯಕ್ರಮ ಅಧಿಕಾರಿಗಳು

ಒಬ್ಬ ಕಾರ್ಯಕ್ರಮ ಅಧಿಕಾರಿಯು ಒಂದು ಘಟಕಕ್ಕೆ ಮಾತ್ರ ಪ್ರಭಾರಿಯಾಗಿರುತ್ತಾನೆ.

 1. ಬೋಧನಾಂಗಕ್ಕೆ ಸೇರಿದಂಥವರನ್ನು ಮಾತ್ರ ಕಾರ್ಯಕ್ರಮ ಅಧಿಕಾರಿಯನ್ನಾಗಿ ನೇಮಕ ಮಾಡುವುದಕ್ಕಾಗಿ ಪರಿಗಣಿಸಲಾಗುತ್ತದೆ.
 2. ಕಾರ್ಯಕ್ರಮ ಅಧಿಕಾರಿಯು ಕಾಲೇಜಿನ ಪ್ರಾಂಶುಪಾಲರು ಅಥವಾ ಸಂಸ್ಥೆಯ ಮುಖ್ಯಸ್ಥರ ಮೇಲ್ವಿಚಾರಣೆ ಹಾಗೂ ನಿರ್ದೇಶನದ ಅಡಿಯಲ್ಲಿ ಎನ್ಎಸ್ಎಸ್ ಘಟಕದ ಸಂಘಟನೆಗಾಗಿ, ಎನ್ಎಸ್ಎಸ್ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಜವಾಬ್ದಾರನಾಗಿರುತ್ತಾನೆ.
 • ಕಾರ್ಯಕ್ರಮ ಅಧಿಕಾರಿಯು, ಎನ್ಎಸ್ಎಸ್ ಕೈಪಿಡಿ, ಕಾರ್ಯಕ್ರಮ ಮಾರ್ಗಸೂಚಿಗಳು, ಹಾಗೂ ಆಡಳಿತ ಮತ್ತು ಕಾರ್ಯನೀತಿ ನಿರ್ದೇಶನಗಳ ಪ್ರಕಾರ, ಎನ್ಎಸ್ಎಸ್ ಕಾರ್ಯಚಟುವಟಿಕೆಗಳ ಅನುಷ್ಠಾನಕ್ಕಾಗಿ, ವಿಶ್ವವಿದ್ಯಾನಿಲಯದಕಾರ್ಯಕ್ರಮ ಸಮನ್ವಯ ಅಧಿಕಾರಿಯು, ಎನ್ಎಸ್ಎಸ್ನ ಪ್ರ್ರಾದೇಶಿಕ ನಿರ್ದೇಶನಾಲಯ ಮತ್ತು ರಾಜ್ಯ ಎನ್ಎಸ್ಎಸ್ ಅಧಿಕಾರಿಯು ಹೊರಡಿಸಿದ ಅನುದೇಶಗಳನ್ನು ಪಾಲಿಸಲು ಹೊಣೆಗಾರನಾಗಿರುತ್ತಾನೆ.
 1. ಎನ್ಎಸ್ಎಸ್ನ ಪ್ರಾದೇಶಿಕ ನಿರ್ದೇಶನಾಲಯ ಅಥವಾ ರಾಜ್ಯ ಎನ್ಎಸ್ಎಸ್ ಅಧಿಕಾರಿ ಅಥವಾ ಕಾರ್ಯಕ್ರಮ ಸಮನ್ವಯ ಅಧಿಕಾರಿಯು ಹೊರಡಿಸಿದ ಅನುದೇಶಗಳ ನಡುವೆ, ಈ ಅನುದೇಶಗಳು ಭಾರತ ಸರಕಾರವು ಹೊರಡಿಸಿದ, ಎನ್ಎಸ್ಎಸ್ ಕೈಪಿಡಿ/ಕಾರ್ಯಕ್ರಮ ಮಾರ್ಗಸೂಚಿಗಳು ಅಥವಾ ಆಡಳಿತ ಅಥವಾ ಕಾರ್ಯನೀತಿ ನಿರ್ದೇಶನಗಳ ಮೇಲೆ ಆಧಾರವಾಗಿರುವುದರಿಂದ, ಯಾವುದೇ ಘರ್ಷಣೆ ಇರತಕ್ಕುದ್ದಲ್ಲ.

ಕಾರ್ಯಕ್ರಮ ಅಧಿಕಾರಿಯ ನೇಮಕ, ಕರ್ತವ್ಯಗಳು ಮತ್ತು ಪ್ರಕಾರ್ಯಗಳು:

 • ಕಾರ್ಯಕ್ರಮ ಅಧಿಕಾರಿಯು, ಎನ್ಎಸ್ಎಸ್ನ ಮೌಲ್ಯಗಳು ಮತ್ತು ತತ್ವವನ್ನು ಅರ್ಥ ಮಾಡಿಕೊಳ್ಳುವಂತೆ ಯುವ ವಿದ್ಯಾರ್ಥಿಗಳಲ್ಲಿ ಆಸಕ್ತಿ ಹುಟ್ಟಿಸಬೇಕು. ಆತನ/ಆಕೆಯ ಪ್ರಭಾರದ ಅಡಿಯಲ್ಲಿ ಎನ್ಎಸ್ಎಸ್ನ ಕಾರ್ಯಚಟುವಟಿಕೆಗಳ ಯೋಜನೆ, ಅನುಷ್ಠಾನ ಮತ್ತು ಮೌಲ್ಯಮಾಪನ ಮಾಡಲು ವಿದ್ಯಾರ್ಥಿಗಳಿಗೆ ನೆರವು ನೀಡುವುದು ಮತ್ತು ಸ್ವಯಂಸೇವಕ ವಿದ್ಯಾರ್ಥಿಗಳಿಗೆ ಸರಿಯಾದ ಮಾರ್ಗದರ್ಶನ ಮತ್ತು ನಿರ್ದೇಶನಗಳನ್ನು ನೀಡುವುದು ಕಾರ್ಯಕ್ರಮ ಅಧಿಕಾರಿಯ ಆದ್ಯ ಕಾರ್ಯವಾಗಿರುತ್ತದೆ.

 1. ಎನ್ಎಸ್ಎಸ್ನ ಕಾರ್ಯಕ್ರಮದಡಿ ಆತನ/ಆಕೆಯ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಕಾರ್ಯಕ್ರಮ ಅಧಿಕಾರಿಯು ಆತನ/ಆಕೆಯ ಸಂಸ್ಥೆಯಲ್ಲಿ ಎನ್ಎಸ್ಎಸ್ ಕಾರ್ಯಕ್ರಮದ ಗುಣಮಟ್ಟ ಹಾಗೂ ಪ್ರಮಾಣವನ್ನು ಸುಧಾರಿಸಲು ಸಾರ್ವಜನಿಕ ಸಂಪರ್ಕ ಅಧಿಕಾರಿಯು ಒಬ್ಬಸಂಘಟನಕಾರ, ಒಬ್ಬ ಶಿಕ್ಷಣ ತಜ್ಞ, ಒಬ್ಬ ಸಮನ್ವಯಕಾರ, ಒಬ್ಬ ಮೇಲ್ವಿಚಾರಕ, ಒಬ್ಬ ಆಡಳಿತಗಾರನ ಪಾತ್ರವನ್ನು ವಹಿಸುತ್ತಾನೆ. ಆತನ/ಆಕೆಯ ಪ್ರಕಾರ್ಯಗಳನ್ನು ಈ ಮುಂದಿನಂತೆ ಹೇಳಬಹುದಾಗಿದೆ.

(ಎ) ಒಬ್ಬ ಸಂಘಟಕನಾಗಿ,-

 • ವಿದ್ಯಾರ್ಥಿಗಳು ಮತ್ತು ಕಾಲೇಜು ಸಮುದಾಯದ ಇತರೆ ಸದಸ್ಯರಿಗೆ ಪರಿಯೋಜನೆಯ ಬಗ್ಗೆ ವಿವರಿಸುವುದು ಮತ್ತು ಪರಿಯೋಜನೆ ಕುರಿತು ಜಾಗೃತಿಯನ್ನುಂಟು ಮಾಡುವುದು;
 • ಎನ್ಎಸ್ಎಸ್ ಕೆಲಸಕ್ಕಾಗಿ ವಿದ್ಯಾರ್ಥಿಗಳನ್ನು ಪ್ರೇರೆಪಿಸುವುದು, ನೇಮಕ ಮಾಡುವುದು ಮತ್ತು ಆಯ್ಕೆ ಮಾಡುವುದು;
 • ಸಮುದಾಯ ಏಜೆನ್ಸಿಗಳು, ಸರ್ಕಾರೀ ಇಲಾಖೆಗಳು, ಮತ್ತು ಸರ್ಕಾರೇತರ ಏಜೆನ್ಸಿಗಳ ಸಹಕಾರ ಮತ್ತು ಸಮನ್ವಯವನ್ನು ಪಡೆಯುವುದು; ಹಾಗೂ
 • ಒಂದು ಪ್ರಾಯೋಜನೆ ಮತ್ತು ಕಾರ್ಯಸಾಧ್ಯತೆಯ ಆಧಾರದ ಮೇಲೆ ಸೇವಾ ಪ್ರಾಯೋಜನೆಗಳನ್ನು ಆಯ್ಕೆ ಮಾಡಿಕೊಳ್ಳುವುದು.

 (ಬಿ) ಒಬ್ಬ ಶಿಕ್ಷಣತಜ್ಞನಾಗಿ,-

 • ಎನ್ಎಸ್ಎಸ್ನ ಸ್ವಯಂ ಸೇವಕರಿಗಾಗಿ, ಅಭಿಶಿಕ್ಷಣ ತರಬೇತಿ ಕಾರ್ಯಕ್ರಮವನ್ನು ಸಿದ್ಧಪಡಿಸುವುದು, ಅವರಿಗೆ ಸಮಾಜ ಸೇವೆಯ ಪರಿಕಲ್ಪನೆ ಕುರಿತು ವಿವರಿಸುವುದು, ಮತ್ತು ಅವರಿಗೆ ಪರಿಯೋಜನೆ ಧ್ಯೇಯೋದ್ದೇಶಗಳನ್ನು ಸಾಧಿಸುವುದಕ್ಕಾಗಿ ಅಗತ್ಯವಾದ ವಿಧಾನಗಳು ಮತ್ತು ಕೌಶಲಗಳನ್ನು ಬೋಧಿಸುವುದು;

 • ಸಭೆಗಳ , ಸಂವಾದಗಳು, ಸುದ್ದಿ ಪ್ರಕಟಣೆಗಳು, ಚರ್ಚೆಗಳು ಮುಂತಾದವುಗಳ ಮುಖಾಂತರ ಸಮುದಾಯ ಶಿಕ್ಷಣಕ್ಕೆ ಉತ್ತೇಜನ ನೀಡುವುದು; ಹಾಗೂ
 • ಶೈಕ್ಷಣಿಕ ಪಠ್ಯದೊಂದಿಗೆ ನೇರ ಸಂಬಂಧ ಹೊಂದಬಹುದಾಗಿರುವ ಎನ್ಎಸ್ಎಸ್ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಸಹಾಯ ಮಾಡುವುದು.

 (ಸಿ) ಒಬ್ಬ ಸಮನ್ವಯ ಅಧಿಕಾರಿಯಾಗಿ,-

 • ವಿದ್ಯಾರ್ಥಿಗಳ ಕಾರ್ಯಸಾಮಥ್ರ್ಯ ಮತ್ತು ಸಮುದಾಯದ ಬೇಡಿಕೆಗಳ ಅನುಸಾರವಾಗಿ ಎನ್ಎಸ್ಎಸ್ ಕಾರ್ಯಚಟುವಟಿಕೆಗಳನ್ನು ಸಮನ್ವಯಗೊಳಿಸುವುದು;
 • ಈ ಪರಿಯೋಜನೆಯ ಅನುಷ್ಠಾನದಲ್ಲಿ ವಿದ್ಯಾರ್ಥಿಗಳ ಜ್ಞಾನ ಮತ್ತು ಕೌಶಲಗಳನ್ನು ಹೆಚ್ಚಿಸುವುದಕ್ಕಾಗಿ ಪರಿಣಿತ ಶಿಕ್ಷಕರ ಬೋಧನೆಯ ರೂಪದಲ್ಲಿ ಲಭ್ಯವಿರುವ ಆಂತರಿಕ ಸಂಪನ್ಮೂಲಗಳನ್ನು ಸಮನ್ವಯಗೊಳಿಸುವುದು; ಹಾಗೂ
 • ಎನ್ಎಸ್ಎಸ್ ಕಾರ್ಯಕ್ರಮದ ಯಶಸ್ಸಿಗಾಗಿ ಸರ್ಕಾರಿ ಸೇವೆಗಳು, ಕಲ್ಯಾಣ ಏಜೆನ್ಸಿಗಳು ಮತ್ತು ಸ್ವಯಂಸೇವಕರ ಸಂಸ್ಥೆಗಳ ರೂಪದಲ್ಲಿ ಲಭ್ಯವಿರುವ ಹಲವಾರು ಬಾಹ್ಯ ಸಂಪನ್ಮೂಲಗಳನ್ನು ಸಮನ್ವಯಗೊಳಿಸುವುದು.

 (ಡಿ) ಒಬ್ಬ ಮೇಲ್ವಿಚಾರಕನಾಗಿ:-

 • ವಿದ್ಯಾರ್ಥಿಗಳು ತಮ್ಮ ಕೆಲಸ-ಕಾರ್ಯಗಳನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಲು ನೆರವಾಗುವುದು. ಆತನ/ಆಕೆಯ ಉಸ್ತುವಾರಿ ಮತ್ತು ಸಮಾಲೋಚನಾ ಕೌಶಲಗಳು, ವಿದ್ಯಾರ್ಥಿಗಳು ವಾಸ್ತವಿಕ ಗುರಿಗಳನ್ನು ಹಾಕಿಕೊಳ್ಳಲು ಮತ್ತು ಸಮಸ್ಯೆಗಳನ್ನು ಸವಾಲಾಗಿ ನೋಡಲು ಮತ್ತು ಅವುಗಳನ್ನು ಪರಿಹರಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸಾಧ್ಯವಾಗುವಂತೆ ಇರುವುದು.
 • ಕೆಲಸದ ಮೌಲ್ಯಮಾಪನದಲ್ಲಿ ಮತ್ತು ಅನುಸರಣೆಯಲ್ಲಿ ನೆರವಾಗುವುದು.

 (ಇ) ಒಬ್ಬ ಆಡಳಿತಗಾರನಾಗಿ,-

 • ಪ್ರಾಂಶುಪಾಲರು, ಕಾಲೇಜು ಸಲಹಾ ಸಮಿತಿ ಮತ್ತು ವಿಶ್ವವಿದ್ಯಾನಿಲಯದ ಕಾರ್ಯಕ್ರಮ ಸಮನ್ವಯ ಅಧಿಕಾರಿಗೆ ಘಟಕದ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡುವುದು;
 • ಕಾರ್ಯಕ್ರಮದ ದೈನಂದಿನ ಆಡಳಿತವನ್ನು ನಡೆಸುವುದು;
 • ನಿಯತವಾಗಿ ಪತ್ರವ್ಯವಹಾರವನ್ನು ನಡೆಸುವುದು;
 • ವಿದ್ಯಾರ್ಥಿಗಳು ಭಾಗವಹಿಸಿದ ಮತ್ತು ಕೈಗೊಂಡ ಕಾರ್ಯಚಟುವಟಿಕೆಗಳ ದಾಖಲೆಯನ್ನು ನಿರ್ವಹಿಸುವುದು;
 • ಕಾಲೇಜು/ಶಾಲೆ ಮತ್ತು ವಿಶ್ವವಿದ್ಯಾನಿಲಯಗಳಿಗೆ ಸಲ್ಲಿಸುವುದಕ್ಕಾಗಿ ನಿಯತಕಾಲಿಕವಾಗಿ ಪ್ರಗತಿಯ ವರದಿಯನ್ನು ಸಿದ್ಧಪಡಿಸುವುದು;
 • (vi ನಿಗದಿಪಡಿಸಿದ ನಮೂನೆಗಳಲ್ಲಿ ಲೆಕ್ಕಪತ್ರಗಳು ಮತ್ತು ದಾಸ್ತಾನುಗಳನ್ನು ಇಟ್ಟುಕೊಂಡು ಬರುವುದು;
 • ಕೈಗೊಳ್ಳಬೇಕಾದ ಕಾರ್ಯಚಟುವಟಿಕೆಗಳ ವಾರ್ಷಿಕ ಕ್ಯಾಲೆಂಡರನ್ನು ಸಿದ್ಧಪಡಿಸುವುದು;

(ಎಫ್) ಒಬ್ಬ ಸಾರ್ವಜನಿಕ ಸಂಪರ್ಕ ಅಧಿಕಾರಿಯಾಗಿ,-

 • ಪತ್ರಿಕಾ ವರದಿಗಳು, ರೇಡಿಯೋ ಮತ್ತು ದೂರದರ್ಶನ ಕಾರ್ಯಕ್ರಮಗಳು, ಕರಪತ್ರಗಳು, ವಿಚಾರ ಸಂಕಿರಣಗಳು ಮತ್ತು ಭಾಷಣಕಾರರ ವೇದಿಕೆಗಳ ಮುಖಾಂತರ ಪರಿಯೋಜನೆ ಕುರಿತು ಸಮುದಾಯಕ್ಕೆ ತಿಳಿಸುವುದು;
 • ವಿದ್ಯಾರ್ಥಿಗಳು ಮತ್ತು ಸಮುದಾಯಕ್ಕೆ ಸ್ಪೂರ್ತಿ ಮತ್ತು ಪ್ರೇರಣೆ ಮೂಡಿಸುವ ದೃಷ್ಟಿಯಲ್ಲಿ ಎನ್ಎಸ್ಎಸ್ ಬಗ್ಗೆ ಕಲ್ಪನೆಯನ್ನು ಮೂಡಿಸುವುದಕ್ಕಾಗಿ ಐಇಸಿ ಪ್ರಚಾರ ಕಾರ್ಯಗಳನ್ನು ಕೈಗೊಳ್ಳುವುದು.

 1. ಕಾರ್ಯಕ್ರಮ ಅಧಿಕಾರಿಯ ಆಯ್ಕೆ
 • ಕಾರ್ಯಕ್ರಮ ಅಧಿಕಾರಿಯ ಆಯ್ಕೆಯನ್ನು ಸಂಬಂಧಪಟ್ಟ ವಿಶ್ವವಿದ್ಯಾಲಯ/ +2 ಮಟ್ಟದ ಕಾರ್ಯಕ್ರಮ ಸಮನ್ವಯ ಅಧಿಕಾರಿಯೊಂದಿಗೆ ಸಮಾಲೋಚಿಸಿ, ಸಂಸ್ಥೆಯ ಪ್ರಾಂಶುಪಾಲರು ಮಾಡುತ್ತಾರೆ.

2.1 ವಿದ್ಯಾರ್ಹತೆ

 • ಕಾರ್ಯಕ್ರಮದ ಅಧಿಕಾರಿಯನ್ನು ಬೋಧನಾಂಗ ಸದಸ್ಯರಿಂದ ಮಾತ್ರವೇ ಆಯ್ಕೆ ಮಾಡಲಾಗುವುದು;
 • ಎನ್ಸಿಸಿ ಅಧಿಕಾರಿಗಳು ಮತ್ತು ದೈಹಿಕ ಶಿಕ್ಷಣ ನಿರ್ದೇಶಕರನ್ನು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿಯಾಗಿ ನೇಮಕ ಮಾಡತಕ್ಕದ್ದಲ್ಲ;
 • ಮಹಿಳಾ ಕಾಲೇಜು/ ಬಾಲಕಿಯರ ಶಾಲೆಗಳಲ್ಲಿ ಮಹಿಳಾ ಶಿಕ್ಷಕಿಯನ್ನು ಕಾರ್ಯಕ್ರಮ ಅಧಿಕಾರಿಯಾಗಿ ನೇಮಕ ಮಾಡತಕ್ಕದ್ದು. ಆದರೆ, ಪುರುಷ ಸದಸ್ಯರು, ಮಹಿಳಾ ಕಾರ್ಯಕ್ರಮ ಅಧಿಕಾರಿಗೆ ಸಹಾಯ ಮಾಡಬಹುದಾಗಿದೆ;

 • ಉನ್ನತ ಮಟ್ಟದ ಸಮುದಾಯ ಕಾರ್ಯದ ಪ್ರೇರೇಪಣೆ, ಸಾಮಥ್ರ್ಯ ಹಾಗೂ ಪ್ರವೃತ್ತಿಯನ್ನು ಹೊಂದಿರುವ ವರದಿಗೆ ಸಂಬಂಧಿಸಿದಂತೆ, ಇದಕ್ಕಿಂತಲೂ ಹೆಚ್ಚಾಗಿ ವಿದ್ಯಾರ್ಥಿಗಳೊಂದಿಗೆ ಉತ್ತಮ ಜನಾಭಿಪ್ರಾಯ ಹೊಂದಿರುವ ಶಿಕ್ಷಕನಿಗೆ ಕಾರ್ಯಕ್ರಮ ಅಧಿಕಾರಿಯಾಗಿ ಆದ್ಯತೆ ನೀಡಬೇಕು.

2.2 ಅಧಿಕಾರವಧಿ

 • ಕಾರ್ಯಕ್ರಮ ಅಧಿಕಾರಿಯಾಗಿ ನೇಮಕಗೊಂಡಿರುವ ಶಿಕ್ಷಕನ ಗರಿಷ್ಠ ಅಧಿಕಾರವಧಿಯು ಪ್ರಥಮತಃ 3 ವರ್ಷಗಳಾಗಿರುತ್ತದೆ. ಆದರೆ ಈ ಅವಧಿಯನ್ನು ಪ್ರಾಂಶುಪಾಲರು ಮತ್ತು ಕಾರ್ಯಕ್ರಮ ಸಮನ್ವಯ ಅಧಿಕಾರಿಯು ಆತನ/ಆಕೆಯ ಕಾರ್ಯನಿರ್ವಹಣೆ ಪುನರವಲೋಕನದ ಆಧಾರದ ಮೇಲೆ, 4 ವರ್ಷಗಳವರೆಗೂ ವಿಸ್ತರಿಸಬಹುದಾಗಿದೆ.

3.ತರಬೇತಿ/ ಅಭಿಶಿಕ್ಷಣ

 • ಕಾರ್ಯಕ್ರಮ ಅಧಿಕಾರಿಯನ್ನು ಆತನ/ಆಕೆಯ ಆಯ್ಕೆಯ 3 ತಿಂಗಳುಗಳೊಳಗೆ ಅಭಿಶಿಕ್ಷಣ ವ್ಯಾಸಂಗಕ್ಕೆ ಕಳುಹಿಸಲಾಗುವುದು. ಕಾರ್ಯಕ್ರಮ ಅಧಿಕಾರಿಯು, ಗೊತ್ತುಪಡಿಸಿದ 3 ತಿಂಗಳುಗಳ ಅವಧಿಯಲ್ಲಿ ಅಭಿಶಿಕ್ಷಣವನ್ನು ನಡೆಸದಿರುವ ಸಂದರ್ಭದಲ್ಲಿ ಆತನ/ಆಕೆಯ ಆಯ್ಕೆಯ ದಿನಾಂಕದಿಂದ ಒಂದು ವರ್ಷದೊಳಗೆ ಅಭಿಶಿಕ್ಷಣ ತರಬೇತಿಗೆ ಹೋಗಬೇಕಾಗುತ್ತದೆ.

 1. 3.1 ಸಂಸ್ಥೆಯ ಪ್ರಾಂಶುಪಾಲರು ಕಾರ್ಯಕ್ರಮ ಅಧಿಕಾರಿಯ ಆಯ್ಕೆ ಮತ್ತು ಆಯ್ಕೆಯಾದ ಕಾರ್ಯಕ್ರಮ ಅಧಿಕಾರಿಯ ಅಭಿಶಿಕ್ಷಣದ ಅಗತ್ಯ ಏರ್ಪಾಡು ಕುರಿತಂತೆ ಕಾರ್ಯಕ್ರಮ ಸಮನ್ವಯ ಅಧಿಕಾರಿ, ಎನ್ಎಸ್ಎಸ್ನ ಪ್ರಾದೇಶಿಕ ನಿರ್ದೇಶನಾಲಯ ಮತ್ತು ಸಂಬಂಧಪಟ್ಟ ಇಟಿಐಗಳಿಗೆ ತಿಳಿಸತಕ್ಕದ್ದು. ಪ್ರಾಂಶುಪಾಲರು, ಇಟಿಐಗಳು ನಡೆಸುವ ಅಭಿಶಿಕ್ಷಣ ತರಬೇತಿಯಲ್ಲಿ ಭಾಗವಹಿಸುವುದಕ್ಕಾಗಿ ಕಾರ್ಯಕ್ರಮ ಅಧಿಕಾರಿಯನ್ನು ಬಿಡುಗಡೆಗೊಳಿಸುವಂತೆಯೂ ಸಹ ನೋಡಿಕೊಳ್ಳಬೇಕು. ಅದೇ ರೀತಿಯಾಗಿ ಕಾರ್ಯಕ್ರಮ ಅಧಿಕಾರಿಯು, ಪ್ರತಿ ಎರಡು ವರ್ಷಗಳ ತರುವಾಯ ಅಭಿಶಿಕ್ಷಣ ವ್ಯಾಸಂಗಕ್ಕೆ ಹಾಜರಾಗುವುದು ಅಪೇಕ್ಷಣೀಯವಾಗಿರುತ್ತದೆ ಹಾಗೂ ಈ ಉದ್ದೇಶಕ್ಕಾಗಿ ಕಾರ್ಯಕ್ರಮ ಅಧಿಕಾರಿಯನ್ನು ಕರ್ತವ್ಯದಿಂದ ಬಿಡುಗಡೆ ಮಾಡುವುದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ.

 1. 2 ಆಯ್ಕೆಯಾದ ಕಾರ್ಯಕ್ರಮ ಅಧಿಕಾರಿಯು, ಆತನ/ಆಕೆಯ ಆಯ್ಕೆಯ ದಿನಾಂಕದಿಂದ ಒಂದು ವರ್ಷದೊಳಗೆ ಯಾವುದೇ ಕಾರಣಕ್ಕಾಗಿ ಅಭಿಶಿಕ್ಷಣ ತರಬೇತಿಗೆ ಹೋಗದಿದ್ದರೆ, ಆತನು/ಆಕೆಯು ಕಾರ್ಯಕ್ರಮ ಅಧಿಕಾರಿಯಾಗಿ ಕಾರ್ಯನಿರ್ವಹಿಸುವುದು ನಿಂತುಹೋಗುತ್ತದೆ ಮತ್ತು ಇದಕ್ಕೆ ಬೇರೊಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಾಗುವುದು ಹಾಗೂ ಸಕಾಲದಲ್ಲಿ ತರಬೇತಿಯನ್ನು ನೀಡಲಾಗುವುದು. ಯಾರೇ ಕಾರ್ಯಕ್ರಮ ಅಧಿಕಾರಿಯು ಆತನಿಗೆ/ಆಕೆಗೆ ಗೊತ್ತುಪಡಿಸಿಲಾದ ಅವಧಿಯೊಳಗೆ ತರಬೇತಿಯನ್ನು ಪಡೆಯದಿದ್ದರೆ ಅಭಿಶಿಕ್ಷಣ ತರಬೇತಿಯಿಲ್ಲದೆ ಕಾರ್ಯನಿರ್ವಹಿಸುವಲ್ಲಿ ಕಾರ್ಯಕ್ರಮ ಅಧಿಕಾರಿಯಾಗಿ ಮುಂದುವರೆಸಲಾಗುವುದಿಲ್ಲ.ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯನೀತಿ, 1986 (ಪರಿಷ್ಕøತ-1992)ರ ಸಂಬಂಧದಲ್ಲಿ ವಿಶೇಷ ಪ್ರಾಧಾನ್ಯವನ್ನು ನೀಡುವುದು.

 1. ಶಿಕ್ಷಣ ಕುರಿತ ರಾಷ್ಟ್ರೀಯ ನೀತಿ-1986 ಇದರಲ್ಲಿ, 1992ರಲ್ಲಿ ಮಾಡಲಾದ ಮಾರ್ಪಾಡಿನೊಂದಿಗೆ, ಯುವಕರು, ಶಿಕ್ಷಣ ಸಂಸ್ಥೆಗಳು ಮತ್ತು ಬಾಹ್ಯ ಏಜೆನ್ಸಿಗಳ ಮುಖಾಂತರ ರಾಷ್ಟ್ರದ ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಅವರು ಸ್ವತಃ ತಮ್ಮನ್ನು ತೊಡಗಿಸಿಕೊಳ್ಳುವುದಕ್ಕಾಗಿ ಅವಕಾಶಗಳನ್ನು ಕಲ್ಪಿಸಲಾಗುವುದೆಂದು ಹೇಳಲಾಗಿದ್ದು, ವಿದ್ಯಾರ್ಥಿಗಳು ಒಂದು ಅಥವಾ ಅಸ್ತಿತ್ವದಲ್ಲಿರುವ ಇತರ ಪರಿಯೋಜನೆಗಳಲ್ಲಿ ಅಂದರೆ, ರಾಷ್ಟ್ರೀಯ ಸೇವಾ ಪರಿಯೋಜನೆ, ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್ ಇವುಗಳಲ್ಲಿ ಭಾಗವಹಿಸುವುದು ಅಗತ್ಯವಾಗಿರುತ್ತದೆ. ರಾಷ್ಟ್ರೀಯ ಸೇವಾ ಸ್ವಯಂ ಸೇವಕ ಪರಿಯೋಜನೆಯನ್ನೂ ಸಹ ಬಲಗೊಳಿಸಲಾಗುವುದು. “ವಿಸ್ತರಣಾ ಕಾರ್ಯ, ಸಮಾಜ ಕಾರ್ಯ ಮತ್ತು ಗ್ರಾಮಿಣಾಭಿವೃದ್ಧಿಯಂಥ ವಿಸ್ತರಣಾ ಕಾರ್ಯಚಟುವಟಿಕೆಗಳಿಗೆ ನೇರವಾಗಿ ಸಂಬಂಧಿಸಿದ ಕೆಲವು ಪ್ರದೇಶಗಳಲ್ಲಿ ಶೈಕ್ಷಣಿಕ ಮನ್ನಣೆಯನ್ನು ಪರಿಗಣಿಸುವಂತಿರುತ್ತದೆ” (ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯನೀತಿಯ ಶಿಫಾರಸು - ಪ್ಯಾರಾ 8.22)."ನಾವು ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯನೀತಿಯ (ಎನ್ಪಿಇ) ಪ್ಯಾರಾ 8.22ನ್ನು ಕುರಿತಂತೆ ಬಲವಾಗಿ ಒತ್ತಿ ಹೇಳುತ್ತೇವೆ. ಒಂದು ಅಥವಾ ಅಸ್ತಿತ್ವದಲ್ಲಿರುವ ಇತರ ಪರಿಯೋಜನೆಗಳಲ್ಲಿ ವಿಶೇಷವಾಗಿ ರಾಷ್ಟ್ರೀಯ ಸೇವಾ ಪರಿಯೋಜನೆ (ಎನ್ಎಸ್ಎಸ್) ಮತ್ತು ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್ (ಎನ್ಸಿಸಿ) ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಾಕಷ್ಟು ಸೌಲಭ್ಯಗಳನ್ನು ಒದಗಿಸತಕ್ಕದ್ದು" ಶಿಕ್ಷಣ ಕಾರ್ಯನೀತಿ ಸಮಿತಿ ಜನವರಿ, 1922ರ ಕೇಂದ್ರ ಸಲಹಾ ಮಂಡಳಿಯ ಪ್ಯಾರಾ 13.4.

.

 • 1  ಮೇಲಿನ ಶಿಫಾರಸುಗಳ ಅನುಸರಣೆಯಲ್ಲಿ, ರಾಷ್ಟ್ರೀಯ ಶಿಕ್ಷಣ ಕುರಿತ ಕಾರ್ಯನೀತಿ ಕುರಿತಂತೆ ಕ್ರಿಯಾ ಕಾರ್ಯಕ್ರಮ, 1992 ಇದಕ್ಕೆ ಈ ಕಾರ್ಯಕ್ರಮಗಳಲ್ಲೂ ಶಿಕ್ಷಕರ ಆಸಕ್ತಿ ಹಾಗೂ ಭಾಗವಗುಸಹಿಸುವಿಕೆಯನ್ನು ಪ್ರೋತ್ಸಾಹಿಸಲು, ವಿಶೇಷ ಪ್ರೋತ್ಸಾಹಧನಗಳನ್ನು ಪ್ರಾಪ್ತವಾಗಿಸಲು ಹಾಗೂ ಇದರ ಜೊತೆಗೆ ವಿದ್ಯಾರ್ಥಿಗಳು ಮತ್ತು ಯುವಕರು ಭಾಗವಹಿಸುವಂತೆ ಪ್ರೋತ್ಸಾಹ ನೀಡಲು ಮತ್ತು ಸುಸ್ಥಿರಗೊಳಿಸಲು, ಪ್ರೋತ್ಸಾಹಧನಗಳನ್ನು ಪ್ರಾಪ್ತವಾಗಿಸಲು ಅವಕಾಶ ಕಲ್ಪಿಸಲಾಗಿದೆ. ಇದರ ಸಾಧ್ಯತಾ ಪ್ರೋತ್ಸಾಹಧನಗಳನ್ನು ಈ ಮುಂದಿನಂತೆ ಸೇರಿಸಬಹುದು:-

 • ಸಂಶೋಧನಾ ಕಾರ್ಯಕ್ಕೆ ಸಮಾನವಾಗಿರುವಂತೆ, ವಿಶ್ವವಿದ್ಯಾನಿಲಯದ ವ್ಯವಸ್ಥೆಯ ಮೂರನೆಯ ಆಯಾಮದಡಿ ಒಂದು ವಿಸ್ತರಣಾ ಕಾರ್ಯದಂತೆ ಎನ್ಎಸ್ಎಸ್ಗೆ ಶಿಕ್ಷಕರ ಅತ್ಯಂತ ಉತ್ತಮವಾದ ಕೊಡುಗೆಯ ಮಾನ್ಯತೆ;
 • ಎನ್ಎಸ್ಎಸ್ ಅಡಿ ಅತ್ಯಂತ ಉತ್ತಮವಾದ ಕೊಡುಗೆಗಳಿಗಾಗಿ ಶಿಕ್ಷಕರಿಗೆ ವಿಶೇಷ ಪ್ರೋತ್ಸಾಹಧನಗಳು;
 • ಕಾಲೇಜು ಮತ್ತು ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿಯ ಸಮಯದಲ್ಲಿ, ಎನ್ಸಿಸಿ,  ಎನ್ಎಸ್ಎಸ್ ಮುಂತಾದವುಗಳಡಿ ಅತ್ಯಂತ ಉತ್ತಮ ದಾಖಲೆ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಮತ್ತು ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಉತ್ತೇಜನಕ್ಕಾಗಿಯೂ ವಿಶೇಷ ಪ್ರೋತ್ಸಾಹಧನಗಳು. (ಮಾನವ ಸಂಪನ್ಮೂಲ ಅಭಿವೃದ್ಧಿ   ಮಂತ್ರಾಲಯ, ಭಾರತ ಸರಕಾರದ ಮೂಲಕ ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯನೀತಿ ಕುರಿತಂತೆ ಕ್ರಿಯಾ ಕಾರ್ಯಕ್ರಮ 1992ರ ಪ್ಯಾರಾ ಸಂಖ್ಯೆ: 20.3.3)

 • 2 ಈ ಮೇಲಿನ ಅಂಶಗಳಿಂದ ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯನೀತಿ ಸಂಬಂಧದಲ್ಲಿ ಎನ್ಎಸ್ಎಸ್ಗೆ ವಿಶೇಷ ಒತ್ತನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗಿದ್ದು, ಇದರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಎನ್ಎಸ್ಎಸ್ ಇದರಲ್ಲಾಗಲೀ ಅಥವಾ ಎನ್ಸಿಸಿ ಇದರಲ್ಲಾಗಲೀ ಭಾಗವಹಿಸುವುದಾಗಿ ನಿರೀಕ್ಷಿಸಬಹುದೆಂದು ಉದ್ದೇಶಿಸಲಾಗಿದೆ. ಈ ಪರಿಯೋಜನೆಯು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸ ಮತ್ತು ಇತರೆ ಕಾರ್ಯಚಟುವಟಿಕೆಗಳ ಅವಕಾಶಗಳು ದುರ್ಲಭವಾಗಿರುವಾಗ, ನಮ್ಮ ದೇಶದಲ್ಲಿರುವ ಪ್ರಸಕ್ತ ಕ್ಯಾಂಪಸ್ ಸಂದರ್ಭದಲ್ಲಿ ಉಪಯುಕ್ತವಾಗಿದೆ ಎಂಬುದು ಈಗ ಮನದಟ್ಟಾಗಿದೆ. ಹೀಗೆ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು +2 ಮಟ್ಟದಲ್ಲಿನ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯನೀತಿಯಲ್ಲಿ ಕಲ್ಪಿಸಲಾದಂತೆ ಎನ್ಎಸ್ಎಸ್ ಮತ್ತು ಎನ್ಸಿಸಿ ಇವುಗಳ ಮುಖಾಂತರ ಅಂಥ ಅವಕಾಶಗಳನ್ನು ಪಡೆದುಕೊಳ್ಳುವ ಹಾಗೆ ಇರುವ ಸಂದರ್ಭಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಯನಿರ್ವಹಿಸುವ ಅಗತ್ಯವಿದೆ.

 • 3 ರಾಷ್ಟ್ರೀಯ ಸೇವಾ ಪರಿಯೋಜನೆಯ ಹಿಂದಿನ ಅನುಭವವು ಸಂಪೂರ್ಣವಾಗಿ ಪ್ರೋತ್ಸಾಹದಾಯಕವಾಗಿದೆ. ಸಮುದಾಯ ಸೇವೆ ಮುಖಾಂತರವಾಗಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಾಲಾ/ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳಿಗೆ ವೈವಿಧ್ಯಮಯವಾದ ಅವಕಾಶಗಳನ್ನು ಒದಗಿಸಲಾಗಿದೆ

 1. ಸಂಶೋಧನಾ ಕಾರ್ಯಕ್ಕೆ ಸಮಾನವಾಗಿರುವಂತೆ, ವಿಶ್ವವಿದ್ಯಾನಿಲಯದ ವ್ಯವಸ್ಥೆಯ ಮೂರನೆಯ ಆಯಾಮದಡಿ ಒಂದು ವಿಸ್ತರಣಾ ಕಾರ್ಯದಂತೆ ಎನ್ಎಸ್ಎಸ್ಗೆ ಶಿಕ್ಷಕರ ಅತ್ಯಂತ ಉತ್ತಮವಾದ ಕೊಡುಗೆಯ ಮಾನ್ಯತೆ;
 2. ಎನ್ಎಸ್ಎಸ್ ಅಡಿ ಅತ್ಯಂತ ಉತ್ತಮವಾದ ಕೊಡುಗೆಗಳಿಗಾಗಿ ಶಿಕ್ಷಕರಿಗೆ ವಿಶೇಷ ಪ್ರೋತ್ಸಾಹಧನಗಳು;
 3. ಕಾಲೇಜು ಮತ್ತು ವಿಶ್ವವಿದ್ಯಾನಿಲಯಕ್ಕೆ ವಿದ್ಯಾರ್ಥಿಗಳ ಪ್ರವೇಶಾತಿಯ ಸಮಯದಲ್ಲಿ, ಎನ್ಸಿಸಿ,  ಎನ್ಎಸ್ಎಸ್ ಮುಂತಾದವುಗಳಡಿ ಅತ್ಯಂತ ಉತ್ತಮ ದಾಖಲೆ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಮತ್ತು ವಿಶ್ವವಿದ್ಯಾನಿಲಯಗಳ ವ್ಯಾಪ್ತಿಯಲ್ಲಿರುವ ಕಾಲೇಜುಗಳ ಉತ್ತೇಜನಕ್ಕಾಗಿಯೂ ವಿಶೇಷ ಪ್ರೋತ್ಸಾಹಧನಗಳು. (ಮಾನವ ಸಂಪನ್ಮೂಲ ಅಭಿವೃದ್ಧಿ   ಮಂತ್ರಾಲಯ, ಭಾರತ ಸರಕಾರದ ಮೂಲಕ ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯನೀತಿ ಕುರಿತಂತೆ ಕ್ರಿಯಾ ಕಾರ್ಯಕ್ರಮ 1992ರ ಪ್ಯಾರಾ ಸಂಖ್ಯೆ: 20.3.3)

 • 2 ಈ ಮೇಲಿನ ಅಂಶಗಳಿಂದ ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯನೀತಿ ಸಂಬಂಧದಲ್ಲಿ ಎನ್ಎಸ್ಎಸ್ಗೆ ವಿಶೇಷ ಒತ್ತನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗಿದ್ದು, ಇದರಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯು ಎನ್ಎಸ್ಎಸ್ ಇದರಲ್ಲಾಗಲೀ ಅಥವಾ ಎನ್ಸಿಸಿ ಇದರಲ್ಲಾಗಲೀ ಭಾಗವಹಿಸುವುದಾಗಿ ನಿರೀಕ್ಷಿಸಬಹುದೆಂದು ಉದ್ದೇಶಿಸಲಾಗಿದೆ. ಈ ಪರಿಯೋಜನೆಯು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಾಸಕ್ಕಾಗಿ, ವಿಶೇಷವಾಗಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಾಸ ಮತ್ತು ಇತರೆ ಕಾರ್ಯಚಟುವಟಿಕೆಗಳ ಅವಕಾಶಗಳು ದುರ್ಲಭವಾಗಿರುವಾಗ, ನಮ್ಮ ದೇಶದಲ್ಲಿರುವ ಪ್ರಸಕ್ತ ಕ್ಯಾಂಪಸ್ ಸಂದರ್ಭದಲ್ಲಿ ಉಪಯುಕ್ತವಾಗಿದೆ ಎಂಬುದು ಈಗ ಮನದಟ್ಟಾಗಿದೆ. ಹೀಗೆ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಮತ್ತು +2 ಮಟ್ಟದಲ್ಲಿನ ಎಲ್ಲಾ ವಿದ್ಯಾರ್ಥಿಗಳು ರಾಷ್ಟ್ರೀಯ ಶಿಕ್ಷಣ ಕುರಿತ ರಾಷ್ಟ್ರೀಯ ಕಾರ್ಯನೀತಿಯಲ್ಲಿ ಕಲ್ಪಿಸಲಾದಂತೆ ಎನ್ಎಸ್ಎಸ್ ಮತ್ತು ಎನ್ಸಿಸಿ ಇವುಗಳ ಮುಖಾಂತರ ಅಂಥ ಅವಕಾಶಗಳನ್ನು ಪಡೆದುಕೊಳ್ಳುವ ಹಾಗೆ ಇರುವ ಸಂದರ್ಭಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕಾರ್ಯನಿರ್ವಹಿಸುವ ಅಗತ್ಯವಿದೆ.

 • 3 ರಾಷ್ಟ್ರೀಯ ಸೇವಾ ಪರಿಯೋಜನೆಯ ಹಿಂದಿನ ಅನುಭವವು ಸಂಪೂರ್ಣವಾಗಿ ಪ್ರೋತ್ಸಾಹದಾಯಕವಾಗಿದೆ. ಸಮುದಾಯ ಸೇವೆ ಮುಖಾಂತರವಾಗಿ ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಶಾಲಾ/ ಕಾಲೇಜುಗಳಲ್ಲಿರುವ ವಿದ್ಯಾರ್ಥಿಗಳಿಗೆ ವೈವಿಧ್ಯಮಯವಾದ ಅವಕಾಶಗಳನ್ನು ಒದಗಿಸಲಾಗಿದೆ

ಇತ್ತೀಚಿನ ನವೀಕರಣ​ : 14-10-2019 01:31 PM ಅನುಮೋದಕರು: PRATHAP LINGAIAH

ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸೇವಾ ಯೋಜನೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080