ಅಭಿಪ್ರಾಯ / ಸಲಹೆಗಳು

ಇಲಾಖೆಯ ಹಿನ್ನೆಲೆ

 

ಪೀಠಿಕೆ

 

  1. ಭಾರತದಲ್ಲಿ, ರಾಷ್ಟ್ರೀಯ ಸೇವಾ ಕಾರ್ಯದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ವಿಚಾರವು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಕಾಲಕ್ಕಿಂತಲೂ ಹಿಂದಿನದ್ದಾಗಿದೆ. ಅವರು ತಮ್ಮ ವಿದ್ಯಾರ್ಥಿ ಸಭಿಕರ ಮೇಲೆ ಪ್ರಭಾವವನ್ನು ಬೀರಲು ಪದೇ ಪದೇ ಪ್ರಯತ್ನಪಟ್ಟಂಥ ಅತಿ ಮುಖ್ಯವಾದ ವಿಷಯವೇನೆಂದರೆ, ಅವರು ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ಸದಾ ಕಾಪಾಡಿಕೊಂಡು ಬರುವುದಾಗಿತ್ತು. ವಿದ್ಯಾರ್ಥಿಗಳು, ತಮ್ಮ ಅಧ್ಯಯನದ ಅವಧಿಯು ಬೌದ್ಧಿಕ ಐಷಾರಾಮಿ ಜೀವನವನ್ನು ನಡೆಸಲು ಇರುವಂತಹ ಒಂದು ಅವಕಾಶವಾಗಿರುವುದಾಗಿ ಭಾವಿಸಬಾರದು, ಆದರೆ ಹಾಗೆ ಸಮಾಜಕ್ಕೆ ಅವಶ್ಯವಾಗಿರುವಂತಹ ರಾಷ್ಟ್ರೀಯ ಸರಕು ಮತ್ತು ಸೇವೆಗಳೊಂದಿಗೆ ರಾಷ್ಟ್ರದ ಮುಖ್ಯ ಸಾಧನಗಳನ್ನು ಒದಗಿಸಿರುವಂತಹ ಜನರಿಗೆ ಅಂತಹ ಸೇವೆಯನ್ನು ಸಲ್ಲಿಸುವಲ್ಲಿ ಅಂತಿಮವಾಗಿ ಸ್ವತಃ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಹಾಗೆ ಸಿದ್ಧಗೊಳ್ಳುವುದು ಅವರ ಪ್ರಥಮ ಕರ್ತವ್ಯವಾಗಿರಬೇಕು. ಯಾರ ನಡುವೆ ಅವರ ಸಂಸ್ಥೆಯು ಇರುವುದೋ ಅಂಥ ಸಮುದಾಯದೊಂದಿಗೆ ಜೀವನ ಸಂಪರ್ಕವನ್ನು ರೂಪಿಸಿಕೊಳ್ಳುವಂತೆ ಅವರಿಗೆ ಸಲಹೆ ನೀಡುವ ಮೂಲಕ ಆರ್ಥಿಕ ಮತ್ತು ಸಾಮಾಜಿಕ ನ್ಯೂನತೆ ಕುರಿತಂತೆ ಶೈಕ್ಷಣಿಕ ಸಂಶೋಧನೆಯನ್ನು ಕೈಗೊಳ್ಳುವ ಬದಲಾಗಿ, ವಿದ್ಯಾರ್ಥಿಗಳು "ಗ್ರಾಮೀಣ ಜನರ ಬದುಕನ್ನು ಉನ್ನತವಾದ ಐಹಿಕ ಮತ್ತು ನೈತಿಕ ಮೇಲ್‍ಮಟ್ಟಕ್ಕೆ ಎತ್ತುವ ಹಾಗೆ ಸ್ವಲ್ಪಮಟ್ಟಿಗೆ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಬೇಕೆಂದು ಅವರು ಸಲಹೆ ನೀಡಿದ್ದಾರೆ".
  2. ಉಭಯ ಶೈಕ್ಷಣಿಕ ಸುಧಾರಣೆಯ ಸಾಧನವಾಗಿ ಮತ್ತು ವಿದ್ಯಾವಂತ ಮಾನವ ಶಕ್ತಿಯ ಮಾರ್ಗೋಪಾಯವಾಗಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಸಮಾಜ ಸೇವೆಯನ್ನು ಆರಂಭಿಸುವುದಕ್ಕಾಗಿ ಒಂದು ಪ್ರೇರಣೆ ಮೂಲಕ ಸ್ವಾತಂತ್ರ್ಯೋತ್ತರ ಚಾರಿತ್ರಿಕ ಕಾಲವನ್ನು ಗುರಿಯಾಗಿ ಉಪಯೋಗಿಸಲಾಯಿತು. ಡಾ. ಎಸ್. ರಾಧಾಕೃಷ್ಣನ್ ಅವರು ಮುಖ್ಯಸ್ಥರಾಗಿದ್ದ ವಿಶ್ವವಿದ್ಯಾಲಯ ಅನುದಾನ ಆಯೋಗವು, ಒಂದು ಕಡೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವೆ ಆರೋಗ್ಯಕರವಾದ ಸಂಬಂಧಗಳನ್ನು ಹೆಚ್ಚಿಸುವ ಹಾಗೂ ಮತ್ತೊಂದು ಕಡೆ ಕ್ಯಾಂಪಸ್ ಮತ್ತು ಸಮುದಾಯದ ನಡುವೆ ರಚನಾತ್ಮಕವಾದ ಸಂಪರ್ಕವನ್ನು ಕಲ್ಪಿಸುವ ದೃಷ್ಟಿಯಿಂದ ಸ್ವಯಂ ಪ್ರೇರಿತವಾಗಿ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಸೇವೆಯನ್ನು ಪ್ರಾರಂಭಿಸಲು ಶಿಫಾರಸು ಮಾಡಿತು.
  3. ಈ ವಿಚಾರವನ್ನು ಕೇಂದ್ರಿಯ ಶಿಕ್ಷಣ ಸಲಹಾ ಮಂಡಳಿಯು (ಸಿಎಬಿಇ) ಜನವರಿ 1950ರಲ್ಲಿ ನಡೆಸಿದ ತನ್ನ ಸಭೆಯಲ್ಲಿ ಮತ್ತೆ ಪರಿಗಣಿಸಿತು. ಈ ವಿಷಯದ ಬೇರೆ ಬೇರೆಯ ಅಂಶಗಳನ್ನು ಪರಿಶೀಲಿಸಿದ ನಂತರ ಮತ್ತು ಈ ಕ್ಷೇತ್ರದಲ್ಲಿ ಇತರ ರಾಷ್ಟ್ರಗಳ ಅನುಭವದ ಹಿನ್ನಲೆಯಲ್ಲಿ ಮಂಡಳಿಯು, ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ದೈಹಿಕ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ಮೀಸಲಾಗಿಡಬೇಕೆಂದು, ಹಾಗೆಯೇ ಶಿಕ್ಷಕರು ಸಹ ಅಂಥ ಕೆಲಸದಲ್ಲಿ ಅವರೊಂದಿಗೆ ಸಹಕರಿಸಬೇಕೆಂದು ಶಿಫಾರಸು ಮಾಡಿದೆ. 1952ರಲ್ಲಿ ಭಾರತ ಸರ್ಕಾರವು ಒಪ್ಪಿ ಅಳವಡಿಸಿಕೊಂಡ ಪ್ರಥಮ ಪಂಚ ವಾರ್ಷಿಕ ಯೋಜನೆಯ ಕರಡಿನಲ್ಲಿ, ವಿದ್ಯಾರ್ಥಿಗಳಿಗೆ ಒಂದು ವರ್ಷದ ಅವಧಿಯ ಸಾಮಾಜಿಕ ಮತ್ತು ಶ್ರಮಿಕ ಸೇವೆಯ ಅಗತ್ಯವಿರುವುದಾಗಿ ಮತ್ತಷ್ಟು ಒತ್ತನ್ನು ನೀಡಲಾಯಿತು. ಇದರ ಪರಿಣಾಮವಾಗಿ ಶ್ರಮಿಕ ಮತ್ತು ಸಾಮಾಜಿಕ ಸೇವಾ ಶಿಬಿರಗಳು, ಕ್ಯಾಂಪಸ್ ಕಾರ್ಯಯೋಜನೆಗಳು, ಗ್ರಾಮ ಕಲಿಕೆ ಕಾರ್ಯಯೋಜನೆ ಮುಂತಾದವುಗಳನ್ನು ವಿವಿಧ ಶಿಕ್ಷಣ ಸಂಸ್ಥೆಗಳ ಮೂಲಕ ಕಾರ್ಯಾಚರಣೆಗೆ ತರಲಾಗಿದ್ದು, 1958ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರು ಅವರು ಮುಖ್ಯ ಮಂತ್ರಿಗಳಿಗೆ ಬರೆದ ತಮ್ಮ ಪತ್ರದಲ್ಲಿ, ಪದವಿಗಾಗಿ ಪೂರ್ವಾಪೇಕ್ಷಿತ ಷರತ್ತಾಗಿ ಸಮಾಜ ಸೇವೆಯು ಅಗತ್ಯವಾಗಿರುವ ವಿಚಾರವನ್ನು ಚರ್ಚೆಗೆ ತಂದರು. ತದನಂತರ, ಅವರು ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಸೇವೆಯನ್ನು ಆರಂಭಿಸುವುದಕ್ಕಾಗಿ ಸೂಕ್ತ ಕಾರ್ಯಯೋಜನೆಯನ್ನು ರೂಪಿಸುವಂತೆ ಶಿಕ್ಷಣ ಮಂತ್ರಾಲಯಕ್ಕೆ ನಿರ್ದೇಶನ ನೀಡಿದರು
  4. 1959ರಲ್ಲಿ, ಈ ಪರಿಯೋಜನೆಯ ಕರಡು ರೂಪರೇಷೆಯನ್ನು ಶಿಕ್ಷಣ ಮಂತ್ರಿಗಳ ಸಮಾವೇಶದಲ್ಲಿ ಮಂಡಿಸಲಾಯಿತು. ರಾಷ್ಟ್ರೀಯ ಸೇವೆಗಾಗಿ ಕಾರ್ಯಸಾಧ್ಯವಾದ ಪರಿಯೋಜನೆಯನ್ನು ರೂಪಿಸುವ ತುರ್ತು ಅಗತ್ಯದ ಬಗ್ಗೆ ಸಮಾವೇಶದಲ್ಲಿ ಒಮ್ಮತಕ್ಕೆ ಬರಲಾಯಿತು. ಶಾಲೆಗಳು ಮತ್ತು ಕಾಲೇಜುಗಳಲ್ಲಿ ನೀಡಲಾಗುತ್ತಿರುವಂತಹ ಶಿಕ್ಷಣದಲ್ಲಿ ಸ್ವಲ್ಪಮಟ್ಟಿಗೆ ಏನನ್ನೋ ಬಯಸುತ್ತದೆ ಎಂಬ ಸಂಗತಿಯ ದೃಷ್ಟಿಯಲ್ಲಿ, ಇದರೊಂದಿಗೆ ದೇಶದ ಸಾಮಾಜಿಕ ಮತ್ತು ಆರ್ಥಿಕ ಪುನರ್‍ರಚನೆಯ ಹಿತಾಸಕ್ತಿಯನ್ನು ಉಂಟು ಮಾಡಬಹುದಾಗಿರುವಂಥ ಕಾರ್ಯಕ್ರಮಗಳನ್ನು ಪೂರಕವಾಗಿ ಸೇರಿಸುವುದು ಅಗತ್ಯವಾಗಿತ್ತು. ಪರಿಯೋಜನೆಯ ಧ್ಯೇಯೋದ್ದೇಶಗಳನ್ನು ಸಾಧಿಸಬೇಕಾಗಿದ್ದರೆ ಸಾಧ್ಯವಾದಷ್ಟು ಬೇಗನೆ ಶಿಕ್ಷಣ ಕುರಿತ ಕಾರ್ಯವಿಧಾನದೊಂದಿಗೆ ಸಾಮಾಜಿಕ ಸೇವೆಯನ್ನು ಸಂಯೋಜಿಸವುದು ಅಗತ್ಯವಾಗಿರುತ್ತದೆ ಎಂಬುದಾಗಿ ಅಭಿಪ್ರಾಯಪಡಲಾಯಿತು. ಉದ್ದೇಶಿತ ಪ್ರಾಯೋಗಿಕ ಯೋಜನೆಯ ವಿವರಗಳನ್ನು ನೀಡಲು ಒಂದು ಸಮಿತಿಯನ್ನು ನೇಮಕ ಮಾಡುವಂತೆ ಸಮಾವೇಶದಲ್ಲಿ ಸಲಹೆ ಮಾಡಲಾಯಿತು. ಈ ಶಿಫಾರಸುಗಳ ಅನುಸಾರವಾಗಿ 1959ರ ಅಗಸ್ಟ್ 28ರಂದು ಈ ನಿಟ್ಟಿನಲ್ಲಿ ವಾಸ್ತವಿಕ ಸಲಹೆಗಳನ್ನು ನೀಡಲು ಡಾ. ಸಿ. ಡಿ. ದೇಶಮುಖ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ಸೇವಾ ಸಮಿತಿಯನ್ನು ನೇಮಕ ಮಾಡಲಾಯಿತು. ಈ ರಾಷ್ಟ್ರೀಯ ಸೇವಾ ಸಮಿತಿಯು ಫ್ರೌಢ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಮತ್ತು ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿ ಸ್ವತಃ ತಾವು ದಾಖಲುಗೊಳ್ಳಲು ಉದ್ದೇಶಿಸಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂಭತ್ತು ತಿಂಗಳುಗಳಿಂದ ಒಂದು ವರ್ಷದ ಅವಧಿಯನ್ನು ರಾಷ್ಟ್ರೀಯ ಸೇವೆಗೆ ಕಡ್ಡಾಯಗೊಳಿಸಬಹುದೆಂದು ಶಿಫಾರಸು ಮಾಡಿತು. ಈ ಪರಿಯೋಜನೆಗೆ ಮಿಲಿಟರಿ ತರಬೇತಿ, ಸಮಾಜ ಸೇವೆ, ದೈಹಿಕ ಶ್ರಮ ಮತ್ತು ಸಾಮಾನ್ಯ ಶಿಕ್ಷಣವನ್ನು ಸೇರಿಸಲಾಯಿತು. ಈ ಸಮಿತಿಯ ಶಿಫಾರಸುಗಳನ್ನು ಅದರ ಆರ್ಥಿಕ ತೊಡಕುಗಳು ಮತ್ತು ಅನುಷ್ಠಾನದಲ್ಲಿರುವ ತೊಂದರೆಗಳ ಕಾರಣದಿಂದಾಗಿ ಅಂಗೀಕರಿಸಲು ಸಾಧ್ಯವಾಗಲಿಲ್ಲ.
  5. 1960ರಲ್ಲಿ, ಭಾರತ ಸರ್ಕಾರದ ಸೂಚನೆಯಂತೆ, ಪ್ರೊ. ಕೆ. ಜಿ. ಸಾಯಿಡೇನ್ ಅವರು ಪ್ರಪಂಚದ ಅನೇಕ ದೇಶಗಳಲ್ಲಿ ನೆರವೇರಿಸಿದ ವಿದ್ಯಾರ್ಥಿಗಳ ಮೂಲಕ ರಾಷ್ಟ್ರೀಯ ಸೇವೆಯನ್ನು ಅಧ್ಯಯನ ಮಾಡಿದ್ದು, ವಿದ್ಯಾರ್ಥಿಗಳ ಮೂಲಕ ರಾಷ್ಟ್ರೀಯ ಸೇವೆಯ ಕಾರ್ಯಸಾಧ್ಯ ಪರಿಯೋಜನೆಯನ್ನು ಅಭಿವದ್ಧಿಪಡಿಸಲು ಭಾರತದಲ್ಲಿ ಏನನ್ನು ಮಾಡುವಂತಿರುತ್ತದೆ ಎಂಬ ಅನೇಕ ಶಿಫಾರಸುಗಳೊಂದಿಗೆ ಸರ್ಕಾರಕ್ಕೆ "ಯುವ ಜನರಿಗಾಗಿ ರಾಷ್ಟ್ರೀಯ ಸೇವೆ" ಎಂಬ ಶೀರ್ಷಿಕೆಯಡಿ ತಮ್ಮ ವರದಿಯನ್ನು ಸಲ್ಲಿಸಿದರು. ಪರಸ್ಪರ ಉತ್ತಮ ಬಾಂಧವ್ಯಕ್ಕಾಗಿ ನಿರ್ದಿಷ್ಟ ವಯೋಗುಂಪಿನೊಳಗಿನ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಯೇತರರಿಗೆ ಸಮಾಜ ಸೇವೆ ಶಿಬಿರಗಳನ್ನು ತೆರೆಯಬೇಕೆಂದು ಸಹ ಶಿಫಾರಸನ್ನು ಮಾಡಲಾಯಿತು.
  6. ಡಾ. ಡಿ. ಎಸ್. ಕೊಠಾರಿ (1964-66) ಅವರ ನೇತೃತ್ವದ ಶಿಕ್ಷಣ ಆಯೋಗವು, ಶಿಕ್ಷಣದ ಎಲ್ಲಾ ಹಂತಗಳಲ್ಲಿನ ವಿದ್ಯಾರ್ಥಿಗಳು ಕೆಲವು ರೂಪದ ಸಮಾಜ ಸೇವಾ ಸಂಸ್ಥೆಯೊಂದಿಗೆ ಸಹವರ್ತಿಗಳಾಗಿರಬೇಕೆಂದು ಶಿಫಾರಸು ಮಾಡಿರುತ್ತದೆ. ಇದನ್ನು ರಾಜ್ಯ ಶಿಕ್ಷಣ ಸಚಿವರು ಏಪ್ರಿಲ್ 1967ರಲ್ಲಿ ನಡೆದ ಸಮಾವೇಶದ ಸಂದರ್ಭದಲ್ಲಿ ಪರಿಗಣನೆಗೆ ತೆಗೆದುಕೊಂಡಿದ್ದು, ಅವರು ವಿಶ್ವವಿದ್ಯಾನಿಲಯದ ಹಂತದಲ್ಲಿ, ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ಈಗಾಗಲೇ ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಕೆಡೆಟ್ ಕಾಪ್ರ್ಸ್‍ಗೆ (ಎನ್‍ಸಿಸಿ) ಸೇರಲು ಅನುಮತಿ ನೀಡಬಹುದೆಂದು ಹಾಗೂ ಇದಕ್ಕೆ ಪರ್ಯಾಯವಾಗಿ ಅವರು ರಾಷ್ಟ್ರೀಯ ಸೇವಾ ಪರಿಯೋಜನೆ (ಎನ್‍ಎಸ್‍ಎಸ್) ಎಂದು ಕರೆಯಲ್ಪಡುವ ಒಂದು ಹೊಸ ರೂಪದ ಕಾರ್ಯಕ್ರಮಕ್ಕೆ ಸೇರಲು ಅವಕಾಶ ಮಾಡಿಕೊಡಬಹುದೆಂದು ಶಿಫಾರಸು ಮಾಡಿದ್ದರು. ಆದಾಗ್ಯೂ, ಒಬ್ಬ ಭರವಸೆ ಮೂಡಿಸುವ ಆಟಗಾರನಿಗೆ ಇವೆರಡರಿಂದಲೂ ವಿನಾಯಿತಿ ಕೊಡಬೇಕಾಗಿದ್ದು, ಕ್ರೀಡೆಗಳು, ಅಥ್ಲೆಟಿಕ್‍ಗಳ ಅಭಿವೃದ್ಧಿಗೆ ಆದ್ಯತೆ ನೀಡುವ ಅಗತ್ಯತೆಯ ದೃಷ್ಟಿಯಿಂದ, ಅವರು ರಾಷ್ಟ್ರೀಯ ಕ್ರೀಡಾ ಸಂಘಟನೆ (ಎನ್‍ಎಸ್‍ಓ) ಎಂದು ಕರೆಯಲ್ಪಡುವ ಮತ್ತೊಂದು ಪರಿಯೋಜನೆಗೆ ಸೇರಲು ಅವಕಾಶ ನೀಡಬೇಕು.
  7. ಸೆಪ್ಟೆಂಬರ್ 1969ರಲ್ಲಿ ನಡೆದ ಕುಲಪತಿಗಳ ಸಮಾವೇಶದಲ್ಲಿ ಈ ಶಿಫಾರಸನ್ನು ಸ್ವಾಗತಿಸಿದ್ದು, ಸವಿವರವಾಗಿ ಈ ಪ್ರಶ್ನೆಯನ್ನು ಪರಿಶೀಲಿಸಲು ಕುಲಪತಿಗಳ ವಿಶೇಷ ಸಮಿತಿಯನ್ನು ರಚಿಸಬಹುದೆಂದು ಸಲಹೆ ಮಾಡಲಾಯಿತು. ಭಾರತ ಸರ್ಕಾರದ ರಾಷ್ಟ್ರೀಯ ಶಿಕ್ಷಣ ಕಾರ್ಯನೀತಿ ಕುರಿತ ವಿವರಪತ್ರದಲ್ಲಿ ಕಾರ್ಯಾನುಭವ ಮತ್ತು ರಾಷ್ಟ್ರೀಯ ಸೇವೆಯು ಶಿಕ್ಷಣದ ಸಮಗ್ರ ಭಾಗವಾಗಿರಬೇಕೆಂದು ಹೇಳಲಾಯಿತು. ಮೇ 1969ರಲ್ಲಿ, ಶಿಕ್ಷಣ ಮಂತ್ರಾಲಯ ಹಾಗೂ ವಿಶ್ವವಿದ್ಯಾನಿಲಯ ಅನುದಾನ ಆಯೋಗವು ಕರೆದ ವಿಶ್ವವಿದ್ಯಾನಿಲಯಗಳು ಹಾಗೂ ಉನ್ನತ ಕಲಿಕಾ ಸಂಸ್ಥೆಗಳ ವಿದ್ಯಾರ್ಥಿ ಪ್ರತಿನಿಧಿಗಳ ಸಮಾವೇಶದಲ್ಲೂ ಸಹ, ರಾಷ್ಟ್ರೀಯ ಸೇವೆಯು ರಾಷ್ಟ್ರದ ಸಮಗ್ರತೆಗಾಗಿ ಒಂದು ಪ್ರಬಲ ಸಾಧನವಾಗಿರುತ್ತದೆಂದು ಸಹ ಸರ್ವಾನುಮತದಿಂದ ಘೋಷಿಸಲಾಯಿತು. ಇದನ್ನು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಗ್ರಾಮೀಣ ಜೀವನದ ಬಗ್ಗೆ ತಿಳಿಸಿಕೊಡಲು ಪ್ರಾರಂಭಿಸುವುದು ಉಪಯುಕ್ತವಾಗಿರುತ್ತದೆ. ರಾಷ್ಟ್ರದ ಪ್ರಗತಿ ಮತ್ತು ಏಳಿಗೆಗೆ ವಿದ್ಯಾರ್ಥಿ ಸಮುದಾಯದ ಕೊಡುಗೆಯ ಒಂದು ಪ್ರತೀಕವೆಂಬಂತೆಯೂ ಸಹ ಶಾಶ್ವತ ಮೌಲ್ಯದ ಪ್ರಾಯೋಜನೆಗಳನ್ನು ಕೈಗೊಳ್ಳಬಹುದು.
  8. ಈ ವಿವರಗಳನ್ನು ಬೇಗನೆ ರೂಪಿಸಲಾಯಿತು ಮತ್ತು ಯೋಜನಾ ಆಯೋಗದಿಂದ ನಾಲ್ಕನೇ ಪಂಚ ವಾರ್ಷಿಕ ಯೋಜನೆಯ ಅವಧಿಯಲ್ಲಿ ರಾಷ್ಟ್ರೀಯ ಸೇವಾ ಪರಿಯೋಜನೆಗಾಗಿ (ಎನ್‍ಎಸ್‍ಎಸ್) 5 ಕೋಟಿ ರೂಪಾಯಿಗಳ ಅಂದಾಜು ಮೊಬಲಗನ್ನು ಮಂಜೂರು ಮಾಡಲಾಯಿತು. ರಾಷ್ಟ್ರೀಯ ಸೇವಾ ಪರಿಯೋಜನೆಯನ್ನು (ಎನ್‍ಎಸ್‍ಎಸ್) ಆಯ್ದ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಒಂದು ಪ್ರಾಯೋಗಿಕ ಪ್ರಾಯೋಜನೆಯನ್ನಾಗಿ ಪ್ರಾರಂಭಿಸ ಬೇಕೆಂದು ಹೇಳಲಾಯಿತು.
  9. 1969ರ ಸೆಪ್ಟೆಂಬರ್ 24ರಂದು, ಆಗಿನ ಕೇಂದ್ರ ಶಿಕ್ಷಣ ಮಂತ್ರಿಯಾದ ಡಾ. ವಿ. ಕೆ. ಆರ್. ವಿ. ರಾವ್ ಅವರು ಎಲ್ಲಾ ರಾಜ್ಯಗಳನ್ನು ಒಳಗೊಂಡ 37 ವಿಶ್ವವಿದ್ಯಾನಿಲಯಗಳಲ್ಲಿ ರಾಷ್ಟ್ರೀಯ ಸೇವಾ ಪರಿಯೋಜನೆಯನ್ನು (ಎನ್‍ಎಸ್‍ಎಸ್) ಪ್ರಾರಂಭಿಸಿದರು ಮತ್ತು ಏಕಕಾಲಿಕವಾಗಿ ರಾಜ್ಯಗಳ ಮುಖ್ಯಮಂತ್ರಿಗಳನ್ನು ಅವರ ಸಹಕಾರ ಮತ್ತು ನೆರವಿಗಾಗಿ ಕೋರಿಕೊಂಡರು. ಇದನ್ನು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸುವಂತೆ ಮತ್ತು ನಮ್ಮ ರಾಷ್ಟ್ರದ ತುಳಿತಕ್ಕೊಳಗಾದ ಜನರ ಸಾಮಾಜಿಕ ಏಳಿಗೆಗಾಗಿ.

 

ಇತ್ತೀಚಿನ ನವೀಕರಣ​ : 14-10-2019 11:51 AM ಅನುಮೋದಕರು: PRATHAP LINGAIAH


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ರಾಷ್ಟ್ರೀಯ ಸೇವಾ ಯೋಜನೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080